Select Your Language

Notifications

webdunia
webdunia
webdunia
webdunia

ವಿಮಾನಯಾನ ಸೇವೆ: 2026ರಲ್ಲಿ ಭಾರತ ಇಂಗ್ಲೆಂಡನ್ನು ಹಿಂದಿಕ್ಕಲಿದೆ!

ವಿಮಾನಯಾನ ಸೇವೆ: 2026ರಲ್ಲಿ ಭಾರತ ಇಂಗ್ಲೆಂಡನ್ನು ಹಿಂದಿಕ್ಕಲಿದೆ!
ಬೆಂಗಳೂರು , ಗುರುವಾರ, 20 ಅಕ್ಟೋಬರ್ 2016 (15:02 IST)

ಬೆಂಗಳೂರು: 20 ವರ್ಷದ ನಂತರ ಅಂದರೆ 2026ರಲ್ಲಿ ವಿಮಾನಯಾನ ಸೇವಾ ಕ್ಷೇತ್ರದಲ್ಲಿ ಭಾರತ ಇಂಗ್ಲೆಂಡ್ ದೇಶವನ್ನು ಹಿಂದಿಕ್ಕಿ ಮೂರನೇ ಸ್ಥಾನಪಡೆದುಕೊಳ್ಳಲಿದೆ ಎಂದು ಅಂತಾರಾಷ್ಟ್ರೀಯ ವಿಮಾನ ಸಾರಿಗೆ ಸಂಸ್ಥೆ ತಿಳಿಸಿದೆ.
 


 

ಸದ್ಯ ವಾರ್ಷಿಕ 2016ರ ಪ್ರಕಾರ ಜಗತ್ತಿನಲ್ಲಿ 3.8 ಬಿಲಿಯನ್ ಪ್ರಯಾಣಿಕರು ವಿಮಾನದಲ್ಲಿ ಪ್ರಯಾಣ ಬೆಳೆಸುತ್ತಾರೆ. ಅದರಂತೆ ಇದೇ ಅಂಕಿ ಅಂಶವನ್ನು ಮುಂದಿನ 2035 ಕ್ಕೆ ಲೆಕ್ಕಹಾಕಿದಾಗ 7.2 ಬಿಲಿಯನ್ ಜನ ವಾಯುಸಾರಿಗೆ ಬಳಸಿಕೊಳ್ಳಲಿದ್ದಾರೆ. ಅಂದರೆ ವಾರ್ಷಿಕ 3.5 ಪ್ರತಿಷತದಷ್ಟು ಜನ ವಿಮಾನ ಪ್ರಯಾಣವನ್ನು ಅವಲಂಬಿಸಲಿದ್ದಾರೆ. 

 

ಇನ್ನು 2029 ರ ವೇಳೆಗೆ ಮೊದಲ ಸ್ಥಾನದಲ್ಲಿರಲಿರುವ ಅಮೆರಿಕಾವನ್ನು ಚೀನಾ ಹಿಂದಿಕ್ಕಿ ಮೊದಲ ಸ್ಥಾನಕ್ಕೆ ಏರಲಿದೆ. ಮುಂದಿನ ಎರಡು ದಶಕಗಳಲ್ಲಿ ತಂತ್ರಜ್ಞಾನದಲ್ಲಿ ಬಾರಿ ಬದಾವಣೆಗಳಾಗಲಿದ್ದು, ಎಲ್ಲರೂ ಆಕಾಶಕ್ಕೆ ಹಾರಬೇಕೆನ್ನುವ ಕಾತರದಲ್ಲಿದ್ದಾರೆ. ಜನತೆಯ ಕೈಗೆ ಎಲ್ಲವೂ ಹತ್ತಿರವಾಗಲಿದೆ. ವ್ಯಾಪಾರ ವಹಿವಾಟು ದ್ವಿಗುಣಗೊಳ್ಳಲಿದೆ. ಆಮದು-ರಫ್ತು ವ್ಯಾಪಾರ ಅಭಿವೃದ್ಧಿ ಹೊಂದಲಿದೆ. ಶೇರು ಮಾರುಕಟ್ಟೆ ಗಣನೀಯ ಪ್ರಮಾಣದಲ್ಲಿ ಮುನ್ನಡೆಯಲಿದೆ ಎಂದು ಐಎಟಿಎ ನಿರ್ದೇಶಕ ಹಾಗೂ ಸಿಇಒ ಅಲೆಕ್ಸಾಂಡರ್ ಡಿ. ಜಿನಾಯಿಕ್ ತಿಳಿಸಿದ್ದಾರೆ. 

 

ಚೀನಾ ವಿಮಾನಯಾನ ಮಾರುಕಟ್ಟೆಯಲ್ಲಿ ಪಾರುಪತ್ಯ

1. ಚೀನಾ 20 ವರ್ಷದ ನಚಿತರ 817 ಮಿಲಿಯನ್ ಹೊಸಸ ಪ್ರಯಾಣಿಕರನ್ನು ಹೆಚ್ಚಿಸಿಕೊಂಡು ಒಟ್ಟು 1.3 ಬಿಲಿಯನ್ ನಷ್ಟು ಪ್ರಯಾಣಿಕರನ್ನು ಹೊಂದಿರಲಿದೆ.

2. ಅಮೇರಿಕಾ 484 ಮಿಲಿಯನ್ ಹೊಸ ಪ್ರಯಾಣಿಕರನ್ನು ಹೊಂದಲಿದ್ದು, ಒಟ್ಟು 1.1 ಬಿಲಿಯನ್ ಪ್ರಯಾಣಿಕರಾಗಲಿದ್ದಾರೆ.

3. ಭಾರತ 322 ಮಿಲಿಯನ್ ನೂತನ ವಿಮಾನ ಪ್ರಯಾಣಿಕರನ್ನು ಹೊಂದಲಿದ್ದು, 2026ರರ ವೇಳೆಗೆ ಒಟ್ಟು 442 ಮಿಲಿಯನ್ ಪ್ರಯಾಣಿಕರಾಗಲಿದ್ದಾರೆ ಎಂದು ವರದಿ ನೀಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.


Share this Story:

Follow Webdunia kannada

ಮುಂದಿನ ಸುದ್ದಿ

ಶಾಸಕರನ್ನು ಪರೋಕ್ಷವಾಗಿ ಎಮ್ಮೆಗೆ ಹೋಲಿಸಿದ ಕೆ.ಬಿ.ಕೋಳಿವಾಡ್