Publish Date: Thu, 05 Oct 2017 (08:46 IST)
Updated Date: Thu, 05 Oct 2017 (08:47 IST)
ನವದೆಹಲಿ: ಐಫೋನ್ ಬಳಕೆದಾರರಿಗಾಗಿ ರಿಲಯನ್ಸ್ ಜಿಯೋ ಭರ್ಜರಿ ಆಫರ್ ಘೋಷಿಸಿದ ಬೆನ್ನಲ್ಲೇ ಏರ್ ಟೆಲ್ ಕೂಡಾ ತನ್ನ ಪ್ರಿಪೇಯ್ಡ್ ಗ್ರಾಹಕರಿಗಾಗಿ ಬಂಪರ್ ಆಫರ್ ನೀಡಿದೆ.
799 ರೂ. ಪಾವತಿಸಿದರೆ ಪ್ರತಿನಿತ್ಯ 3 ಜಿಬಿ ಡಾಟಾ ಹಾಗೂ ಎಲ್ಲಾ ಕರೆಗಳೂ ಉಚಿತವಾಗಿ ಸಿಗಲಿದೆ. ಈ ಸೌಲಭ್ಯಕ್ಕೆ 28 ದಿನಗಳ ವ್ಯಾಲಿಡಿಟಿ ಇದೆ. ಜಿಯೋ ಕೂಡಾ ಇತ್ತೀಚೆಗೆ ಐಫೋನ್ ಗ್ರಾಹಕರಿಗೆ 799 ರೂ. ಗಳ ಆಫರ್ ನೀಡಿತ್ತು.
ಜಿಯೋ ಸಂಸ್ಥೆ ಜತೆಗೆ ಸದಾ ನೇರ ಸ್ಪರ್ಧೆ ನಡೆಸುವ ಏರ್ ಟೆಲ್ ಈಗಾಗಲೇ ಜಿಯೋ ಫೋನ್ ನಂತೆಯೇ ಅಗ್ಗದ ಫೋನ್ ಮಾರುಕಟ್ಟೆಗೆ ತರಲೂ ತಯಾರಿ ನಡೆಸಿದೆ. ಇದರಿಂದ ಗ್ರಾಹಕರಿಗಂತೂ ಭರ್ಜರಿ ಲಾಭವಾಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ