ಆದಿತ್ಯಾ ಬಿರ್ಲಾ ಗ್ರೂಪ್ ಆರೋಗ್ಯ ವಿಮಾ ಕ್ಷೇತ್ರಕ್ಕೆ ಅಡಿಯಿಟ್ಟಿದೆ. ದಕ್ಷಿಣ ಆಫ್ರಿಕಾದ ಎಂಎಂಐ ಹೋಲ್ಡಿಂಗ್ಸ್ ಜೊತೆ ಒಪ್ಪಂದ ಮಾಡಿಕೊಂಡು ಆದಿತ್ಯ ಬಿರ್ಲಾ ಹೆಲ್ತ್ ಇನ್ಸುರೆನ್ಸ್ ಕಂಪನಿ ಲಿಮಿಟೆಡ್ ಹೆಸರಿನ ಹೊಸ ಕಂಪನಿಯನ್ನು ಆರಂಭಿಸಿದೆ.
ದೇಶದಲ್ಲಿ ಆರೋಗ್ಯ ವಿಮೆಯನ್ನು ಇನ್ನಷ್ಟು ಜನರಿಗೆ ವಿಸ್ತರಿಸುವುದೇ ತಮ್ಮ ಗುರಿ ಎಂದು ಕಂಪನಿ ಸಿಇಓ ಮಯಾಂಕ್ ಬತ್ವಾಲ್ ಪತ್ರಕರ್ತರಿಗೆ ತಿಳಿಸಿದ್ದಾರೆ. ಅಮೆರಿಕಾ, ಚೀನಾದಂತಹ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದ ಜನಸಂಖ್ಯೆಯಲ್ಲಿ ತುಂಬ ಕಡಿಮೆ ಜನಕ್ಕೆ ಆರೋಗ್ಯ ವಿಮೆ ಇದೆ. ಈ ಕ್ಷೇತ್ರದಲ್ಲಿಅಭಿವೃದ್ಧಿಗೆ ಅತ್ಯಧಿಕ ಅವಕಾಶಗಳಿವೆ ಎಂದು ಆದಿತ್ಯಾ ಬಿರ್ಲಾ ಹೆಲ್ತ್ ಭಾವಿಸಿದೆ.
ಈಗಾಗಲೆ ಪಾಲಸಿದಾರರ ಅಗತ್ಯಕ್ಕೆ ತಕ್ಕಂತೆ ಎರಡು ಗ್ರೂಪ್ ಇನ್ಸುರೆನ್ಸ್ ಪಾಲಸಿಗಳು, ಒಂದು ವೈಯಕ್ತಿಕ ಪಾಲಸಿ ಪ್ರಾರಂಭಿಸಿದೆ. ವೈಯಕ್ತಿಕ ವಿಮೆ ಮಾಡಿಸಿಕೊಂಡಿರುವವರಿಗೆ ಕ್ಲೈಮ್ ಮಾಡದಂತಹ ಪ್ರತಿ ತಿಂಗಳಿಗೆ ಪಾಲಿಸಿ ಮೊತ್ತದಲ್ಲಿ ಶೇ.2.5ರಷ್ಟು ಪ್ರೋತ್ಸಾಹ ದನ ಕೊಡುತ್ತಿರುವುದಾಗಿ ಮಯಾಂಕ್ ತಿಳಿಸಿದ್ದಾರೆ.
ಈ ಮೊತ್ತವನ್ನು ಪಾಲಿಸಿದಾರರು ಆರೋಗ್ಯ ಉತ್ಪನ್ನಗಳಿಗೆ ಅಥವಾ ಸೇವೆಗಳ ಬಳಕೆಗೆ ಉಪಯೋಗಿಸಬಹುದು. ಅಥವಾ ವಿಮೆ ರಿನೀವಲ್ ಮಾಡುವ ವೇಳೆ ರಿಯಾಯಿತಿಯಾಗಿ ಬಳಸಬಹುದು. ಚಿಕ್ಕ ವಯಸ್ಸಿನಲ್ಲೇ ಯುವಕರಿಗೆ ಆರೋಗ್ಯ ವಿಮಾ ಸೇವೆಗಳನ್ನು ತರುವ ಮೂಲಕ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳಬೇಕು ಎಂಬುದು ತಮ್ಮ ಮುಂದಿನ ಗುರಿ ಎಂದಿದ್ದಾರೆ ಮಯಾಂಕ್.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.