Select Your Language

Notifications

webdunia
webdunia
webdunia
webdunia

16ಕ್ಕೆ ತಾಯಾಗಿ 23ಕ್ಕೆ ಜೀವನಯಾನ ಅಂತ್ಯಗೊಳಿಸಿದ ಎಂಟಿವಿ ಪ್ರೆಗ್ನೆಂಟ್ ಸ್ಟಾರ್

16ಕ್ಕೆ ತಾಯಾಗಿ 23ಕ್ಕೆ ಜೀವನಯಾನ ಅಂತ್ಯಗೊಳಿಸಿದ ಎಂಟಿವಿ ಪ್ರೆಗ್ನೆಂಟ್ ಸ್ಟಾರ್
, ಶನಿವಾರ, 24 ಡಿಸೆಂಬರ್ 2016 (12:56 IST)
2010ರ ಎಂಟಿವಿ ಹಿಟ್ ರಿಯಾಲಿಟಿ ಶೋ "16 ಆ್ಯಂಡ್ ಪ್ರೆಗ್ನೆಂಟ್" ಸ್ಟಾರ್ ಆಗಿ ಹೊರಹೊಮ್ಮಿದ್ದ ವಲೇರಿ ಫೇರ್‌ಮನ್ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೀತಿಮೀರಿದ ಮಾದಕ ವ್ಯಸನ ಚಟವೇ ಅವಳನ್ನು ಸಾವಿನ ದವಡೆಗೆ ನೂಕಿಸಿದೆ ಎಂದು ಹೇಳಲಾಗುತ್ತಿದೆ. ಮರಣೋತ್ತರ ವರದಿ ಬಂದ ಬಳಿಕವೇ ಅವರ ಸಾವಿಗ ನಿಜವಾದ ಕಾರಣವೇನೆಂದು ಬಹಿರಂಗವಾಗಲಿದೆ.
ಸ್ವಚ್ಛಂದ ಜೀವನ ಶೈಲಿಯಿಂದ ಗುರುತಿಸಿಕೊಂಡಿದ್ದ ಈ ಕಿರಿಯ ವಯಸ್ಸಿನ ಸ್ಟಾರ್ 15ನೇ ವಯಸ್ಸಿಗೆ ಗರ್ಭಿಣಿಯಾಗಿದ್ದರು. 
16 ವರ್ಷಕ್ಕೆ ತಾಯಿಯಾಗಿದ್ದ ಅವರ 7 ವರ್ಷದ ಮಗಳಿದ್ದು, ಫೇರ್‌ಮನ್ ದತ್ತು ತಾಯಿಯ ಆರೈಕೆಯಲ್ಲಿದ್ದಾಳೆ.
 
ಬುಧವಾರ ಫೇರ್‌ಮನ್ ತಮ್ಮ ಸ್ನೇಹಿತರ ಮನೆಯ ಸ್ನಾನದ ಕೋಣೆಯಲ್ಲಿ ನಿಸ್ತೇಜ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. 
 
ಸ್ನೇಹಿತರು ಮತ್ತು ಕುಟುಂಬದವರು ಸಾಮಾಜಿಕ ಜಾಲತಾಣಗಳಲ್ಲಿ ಫೇರ್‌ಮನ್ ಸಾವಿನ ಸುದ್ದಿಯನ್ನು ಖಚಿತಪಡಿಸಿದ್ದಾರೆ.
 
ಪೊಲೀಸರನ್ನು ವಂಚಿಸಿದ ಪ್ರಕರಣದಲ್ಲಿ ಕಳೆದವಾರ ಅವರು ಬಂಧನಕ್ಕೊಳಪಟ್ಟಿದ್ದರು. 

Share this Story:

Follow Webdunia kannada

ಮುಂದಿನ ಸುದ್ದಿ

ಮಾರುತಿ ಸುಜುಕಿ ರೀಟೇಲ್ ಮಾರಾಟ ಕುಸಿತ