ಭಾರತದಲ್ಲಿ ಇಂಟರ್‌ನೆಟ್ ಬಳಕೆದಾರರ ಸಂಖ್ಯೆ ರಾಕೆಟ್ ವೇಗದಲ್ಲಿ ಸಾಗುತ್ತಿದೆ. 4ಜಿ, 3ಜಿ ಸೇವೆಗಳ ವಿನಿಮಯ ಅಗಾಧವಾಗಿ ಬೆಳೆದ ಪರಿಣಾಮ 2020ಕ್ಕೆ ಭಾರತದಲ್ಲಿ ಇಂಟರ್‌ನೆಟ್ ಬಳಕೆದಾರರ ಸಂಖ್ಯೆ 60 ಕೋಟಿಗೆ ಸೇರಲಿದೆ ಎಂದು ಸಮೀಕ್ಷೆಯೊಂದು ಹೇಳುತ್ತಿದೆ.
ಸದ್ಯಕ್ಕೆ ಭಾರತದಲ್ಲಿ 34.4 ಕೋಟಿ ಮಂದಿದ್ ಇಂಟರ್‌ನೆಟ್ ಬಳಸುತ್ತಿದ್ದಾರೆ. ಕೇಂದ್ರ ಸರಕಾರ ಪ್ರಕಟಿಸಿದ ಡಿಜಿಟಲ್ ಇಂಡಿಯಾ ಕೆಲವೊಂದು ಸವಾಲುಗಳನ್ನು ಎದುರಿಸುತ್ತಿದೆ. ಆದಾಗ್ಯೂ ನೆಟ್ ಬಳಕೆದಾರರ ಸಂಖ್ಯೆ ಹೆಚ್ಚುತ್ತಿದೆ ಎಂದುಉ ಅಸೋಚಾಮ್-ಡೆಲಾಯಿಟ್ ಜಂಟಿಯಾಗಿ ರೂಪಿಸಿದ ಸಮೀಕ್ಷೆಯಲ್ಲಿ ಅಭಿಪ್ರಾಯಪಡಲಾಗಿದೆ.
ಅತ್ಯಂತ ವೇಗವಾದ ಡೇಟಾ ಸೇವೆಗಳು, ಬಹಿರಂಗ ಪ್ರದೇಶಗಳಲ್ಲಿ ವೈಫೈ ಸೇವೆ ಲಭ್ಯವಿಲ್ಲ. ಜಗತ್ತಿನಾದ್ಯಂತ ಪ್ರತಿ 150 ಮಂದಿಗೆ ಒಂದು ವೈಫೈ ಹಾಟ್‌ಸ್ಫಾಟ್ ಇದೆ. ಅದೇ ಭಾರತದಲ್ಲಿ 80 ಲಕ್ಷ ಮಂದಿದ್ಗೆ ಒಂದಿದೆ ಎನ್ನುತ್ತದೆ ಸಮೀಕ್ಷೆಯ ಅಂಕಿಸಂಖ್ಯೆ.
ಸದ್ಯಕ್ಕೆ 31 ಸಾವಿರ ಹಾಟ್‌ಸ್ಫಾಟ್‌ಗಳು ಮಾತ್ರ ಇವೆ. 55 ಸಾವಿರ ಗ್ರಾಮಗಳಿಗೆ ಮೊಬೈಲ್ ಸಂಪರ್ಕ ಸಹ ಇಲ್ಲ. ಈಗ 24 ಕೋಟಿ ಇರುವ ಸ್ಮಾರ್ಟ್‌ಫೋನ್ ಬಳಕೆ 2020ಕ್ಕೆ 52 ಕೋಟಿಗೆ ಸೇರುವ ಅವಕಾಶ ಇದೆ ಎಂದು ಸಮೀಕ್ಷೆ ಹೇಳುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.