Select Your Language

Notifications

webdunia
webdunia
webdunia
webdunia

ಆರು ಮೋಟೋ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ರಿಯಾಯಿತಿ

ಆರು ಮೋಟೋ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ರಿಯಾಯಿತಿ
New Delhi , ಮಂಗಳವಾರ, 21 ಫೆಬ್ರವರಿ 2017 (22:23 IST)
ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ವಿಶೇಷ ಮಾನ್ಯತೆ ಪಡೆದಿರುವ ಮೋಟೋ ಕಂಪೆನಿ ಮೂರನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಕೆಲವು ಮಾಡೆಲ್ಸ್ ಮೇಲೆ ಭಾರಿ ರಿಯಾಯಿತಿ ಪ್ರಕಟಿಸಿದೆ. ಫೆ.20, 21ರಂದು ಈ ರಿಯಾಯಿತಿ ಬೆಲೆಗಳು ಅನ್ವಯವಾಗಲಿದೆ. 
 
ಆನ್‌ಲೈನ್ ಶಾಪಿಂಗ್ ತಾಣ ಫ್ಲಿಪ್‍ಕಾರ್ಟ್‌ನಲ್ಲಿ ಆರು ಮೋಟೋ ಸ್ಮಾರ್ಟ್‌ಫೋನ್‌ಗಳ ಮೇಲೆ ರಿಯಾಯಿತಿ ಲಭ್ಯವಾಗಲಿವೆ. ಮೋಟೋ ಝಡ್, ಮೋಟೋ ಝಡ್ ಪ್ಲೇ, ಮೋಟೋ ಎಂ, ಮೋಟೋ ಜಿ ಟರ್ಬೋ ಎಡಿಷನ್, ಮೋಟೋ ಇ ಪವರ್, ಮೋಟೋ ಇ, ಮೋಟೋ ಜಿ ಫೋನ್‌ಗಳು ರಿಯಾಯಿತಿ ಬೆಲೆಯಲ್ಲಿ ಲಭ್ಯವಾಗಲಿವೆ. ಅಷ್ಟೇ ಅಲ್ಲದೆ ಇಂಡಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿದರೆ ಶೇ.10ರಷ್ಟು ಇನ್‍ಸ್ಟಂಟ್ ರಿಯಾಯಿತಿ ಲಭ್ಯವಾಗಲಿದೆ.  
 
1. ಮೋಟೋ ಇ ಪವರ್: ರೂ.7,499 (ರೂ.500 ಕಡಿತ)
2. ಮೋಟೋ ಜಿ ಟರ್ಬೋ ಎಡಿಷನ್: ರೂ. 8,999 (ರೂ.1000 ಕಡಿತ)
3. ಮೋಟೋ ಜಿ 3 ಜನರೇಷನ್ (8ಜಿಬಿ): ರೂ.7,999
4. ಮೋಟೋ ಜಿ 2 ಜನರೇಷನ್ (16 ಜಿಬಿ): 6,999
5. ಮೋಟೋ ಇ 2 ಜನರೇಷನ್ (4ಜಿ, 8ಜಿಬಿ): ರೂ.5,999
6. ಮೋಟೋ ಇ 2 ಜನರೇಷನ್ (3ಜಿ, 8ಜಿಬಿ): ರೂ.4,999 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಾಶಿವರಾತ್ರಿ ಪ್ರಯುಕ್ತ 450 ಹೆಚ್ಚುವರಿ ಬಸ್