Select Your Language

Notifications

webdunia
webdunia
webdunia
webdunia

2019 ರ ವೇಳೆಗೆ 55,669 ಹಳ್ಳಿಗಳಿಗೆ ದೂರ ಸಂಪರ್ಕ

ನರೇಂದ್ರ ಮೋದಿ
ನವದೆಹಲಿ , ಸೋಮವಾರ, 9 ಮೇ 2016 (11:18 IST)
ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ 2019 ರ ಸಾಲಿನ ಮಾರ್ಚ್‌ ಅಂತ್ಯದೊಳಗೆ 55,669 ಹಳ್ಳಿಗಳಿಗೆ ಹಂತ ಹಂತವಾಗಿ ಮೊಬೈಲ್ ಸಂಪರ್ಕ ನೀಡುವ ಯೋಜನೆ ರೂಪಿಸುತ್ತಿದೆ. 
ಈ ಯೋಜನೆ ಅಡಿಯಲ್ಲಿ 2017 ರ ಸೆಪ್ಟೆಂಬರ್ ಅಂತ್ಯದೊಳಗೆ ಈಶಾನ್ಯ ರಾಜ್ಯಗಳ 8621 ಹಳ್ಳಿಗಳಲ್ಲಿ 321 ಮೊಬೈಲ್ ಟವರ್‌ಗಳನ್ನು ಅಳವಡಿಸಲಿದೆ ಎಂದು ಎನ್‌ಡಿಎ ಸರಕಾರದ ಎರಡು ವರ್ಷಗಳ ಅವಧಿಯಲ್ಲಿ ಮಾಡಿದ ಪ್ರಗತಿಯ ಕುರಿತು ಟೆಲಿಕಾಂ ಇಲಾಖೆ ಸಿದ್ಧ ಪಡಿಸಿರುವ ಟಿಪ್ಪಣಿಯಲ್ಲಿ ತಿಳಿಸಲಾಗಿದೆ.
 
ಈ ಅಭಿವೃದ್ಧಿ ಯೋಜನೆಗೆ ತಗಲುವ 5,336.18 ಕೋಟಿ ರೂಪಾಯಿಗಳ ಅಂದಾಜು ಹಣ ಬಿಡುಗಡೆಗೆ ಸರಕಾರ ಈಗಾಗಲೆ ಅನುಮೋದನೆ ನೀಡಿದೆ.
 
ಹೈ-ಸ್ಪೀಡ್ ಬ್ರಾಡ್‌ಬ್ಯಾಂಡ್ ಮೂಲಕ ಗ್ರಾಮೀಣ ಭಾರತವನ್ನು ಜೋಡಿಸುವ ಉದ್ದೇಶದಿಂದ ಕಾರ್ಯರೂಪಕ್ಕೆ ಬರುತ್ತಿರುವ ಈ ಯೋಜನೆ ಕಾಮಗಾರಿ ಭರದಿಂದ ಸಾಗುತ್ತಿದೆ. 48,199 ಗ್ರಾಮ ಪಂಚಾಯತಿಗಳಲ್ಲಿ ಆಪ್ಟಿಕ್ ಫೈಬರ್ ಅಳವಡಿಕೆ ಕಾರ್ಯ ಕಳೆದ ತಿಂಗಳೆ ಪೂರ್ಣಗೊಂಡಿದೆ ಎಂದು ಟಿಲಿಕಾಂ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಬಂಡಾಯ ಶಾಸಕರ ಅಮಾನತು ಎತ್ತಿ ಹಿಡಿದ ಹೈಕೋರ್ಟ್