Select Your Language

Notifications

webdunia
webdunia
webdunia
webdunia

ಅನಾಯಾಸ ಆದಾಯಕ್ಕೆ ಐದು ಮಾರ್ಗಗಳು

passive income. atm
ನವದೆಹಲಿ , ಗುರುವಾರ, 27 ನವೆಂಬರ್ 2014 (19:32 IST)
ನವದೆಹಲಿ: ಇಂದಿನ ಜಗತ್ತಿನಲ್ಲಿ ವ್ಯಕ್ತಿಯ ಜೀವನ ಮಟ್ಟವನ್ನು ನಿರ್ಧರಿಸುವಲ್ಲಿ ಹಣ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿಯೊಬ್ಬರು ಕೆಲವು ನಿಯಮಿತವಾಗಿ ಬರುವ ಅನಾಯಾಸ ಆದಾಯಕ್ಕೆ ಉಪಾಯಗಳನ್ನು ಹುಡುಕುತ್ತಾರೆ. ನಿಮ್ಮ ಸಕ್ರಿಯ ಆದಾಯ ಮೂಲಕ್ಕೆ ಅನಾಯಾಸ ಅಥವಾ ನಿಷ್ಕ್ರಿಯ ಆದಾಯ ಮೂಲ ಸೇರ್ಪಡೆಯಾದರೆ ಅದಕ್ಕಿಂತ ಉತ್ತಮ ಇನ್ನೊಂದಿಲ್ಲ. ಅನಾಯಾಸ ಆದಾಯ ಸೃಷ್ಟಿಸಲು 5 ವಿಧಾನಗಳಿವೆ.
 
1. ಎಟಿಎಂ ಕೇಂದ್ರಕ್ಕೆ ಖರೀದಿ ಜಾಗ
ಪ್ರಸಕ್ತ ಸನ್ನಿವೇಶದಲ್ಲಿ ಬ್ಯಾಂಕುಗಳು ಪ್ರದೇಶದ ಮಾಲೀಕರಿಗೆ ಎಟಿಎಂ ಅಳವಡಿಸಲು ಮಾಸಿಕ 25ರಿಂದ 30 ಸಾವಿರ ಬಾಡಿಗೆ ನೀಡುತ್ತಾರೆ. ಆದರೆ ಎಟಿಎಂ ಅಳವಡಿಕೆಗೆ ಹೆಚ್ಚು ಜಾಗ ಅಗತ್ಯವಿಲ್ಲ.ಮೆಟ್ಟಿಲಿನ ಕೆಳಗಿನ ಜಾಗದಲ್ಲಿ ಎಟಿಎಂ ಅಳವಡಿಸುವ ಮೂಲಕ ಅನಾಯಾಸ ಆದಾಯ ಗಳಿಸಬಹುದು. 
 
2. ಕಂಟೆಂಟ್ ರೈಟಿಂಗ್
ಅನೇಕ ವೆಬ್‌ಸೈಟ್‌ಗಳು ಮತ್ತು ಬ್ಲಾಗ್‌ಗಳಿದ್ದು, ಅದಕ್ಕೆ ಸಾಕಷ್ಟು ಕಂಟೆಂಟ್ ಬೇಕಾಗುತ್ತದೆ. ನಿಮ್ಮ ಬಳಿ ಲ್ಯಾಪ್‌ಟಾಪ್ ಮತ್ತು ಇಂಟರ್‌ನೆಟ್ ಸೌಲಭ್ಯವಿದ್ದರೆ ಕಂಟೆಂಟ್  ಬರವಣಿಗೆ ಕೆಲಸ ಮಾಡಬಹುದು. ಹವ್ಯಾಸಿ ಬರಹಗಾರರು ಮನೆಯಿಂದ ಕೆಲಸ ಮಾಡಿ ಬ್ಯಾಂಕ್ ಖಾತೆಗೆ ಹಣ ಸ್ವೀಕರಿಸುತ್ತಾರೆ. 
3. ವೆಬ್ ಸೈಟ್ ಮತ್ತು ಬ್ಲಾಗ್‌ಗಳು
ಸುಲಭದ ಹಣ ಗಳಿಸಲು ಬ್ಲಾಗಿಂಗ್ ಉತ್ತಮ ವಿಧಾನ. ಬ್ಲಾಗ್ ಅಥವಾ ವೆಬ್‌ಸೈಟ್ ಉಚಿತವಾಗಿ ಸೃಷ್ಟಿಸಿ ಅನಾಯಾಸ ಆದಾಯ ಗಳಿಸಬಹುದು. 
 
4.ಷೇರುಗಳು ಮತ್ತು ಮ್ಯೂಚ್ಯುಯಲ್ ಫಂಡ್‌ಗಳು
  ಷೇರುಗಳು ಮತ್ತು ಮ್ಯುಚ್ಯುವಲ್ ಫಂಡ್‌ಗಳಲ್ಲಿ ಹಣ ಹೂಡಿಕೆ ಮಾಡುವುದು ಹಣ ಸಂಪಾದಿಸುವ ಉತ್ತಮ ವಿಧಾನ. ಆದರೆ ಆಟದ ನಿಯಮ ಸರಿಯಾಗಿ ಅರಿತಿರಬೇಕು. ಇಲ್ಲದಿದ್ದರೆ ಕೈಸುಟ್ಟುಕೊಳ್ಳಬಹುದು
5. ಕಟ್ಟಡಗಳು ಮತ್ತು ಟೆರೇಸ್ ಮೇಲೆ ಜಾಹೀರಾತು
ನಿಮ್ಮ ಕಟ್ಟಡ ಮುಖ್ಯರಸ್ತೆಯಲ್ಲಿದ್ದರೆ ನಿಮ್ಮ ಕಟ್ಟಡದ ಮೇಲೆ ಕೆಲವು ಬ್ಯಾನರ್ ಅಥವಾ ಹೋರ್ಡಿಂಗ್ ಹಾಕುವ ಮೂಲಕ ಹಣ ಗಳಿಸಬಹುದು. ಆದರೆ ಇದಕ್ಕೆ ಅನುಮತಿ ಬೇಕಾಗುತ್ತದೆ.

Share this Story:

Follow Webdunia kannada