Select Your Language

Notifications

webdunia
webdunia
webdunia
webdunia

15 ರೈಲ್ವೆ ನಿಲ್ದಾಣಗಳಿಗೆ ಉಚಿತ ಹೈ-ಸ್ಪೀಡ್ ವೈ-ಫೈ ಸೇವೆ ವಿಸ್ತರಣೆ

15 ರೈಲ್ವೆ ನಿಲ್ದಾಣಗಳಿಗೆ ಉಚಿತ ಹೈ-ಸ್ಪೀಡ್ ವೈ-ಫೈ ಸೇವೆ ವಿಸ್ತರಣೆ
ನವದೆಹಲಿ , ಮಂಗಳವಾರ, 3 ಮೇ 2016 (12:54 IST)
ಗೂಗಲ್ ಸಹಯೋಗದೊಂದಿಗೆ ಭಾರತೀಯ ರೈಲ್ವೆ ಇಲಾಖೆ ಮುಂಬೈ ಸೆಂಟ್ರಲ್ ನಿಲ್ದಾಣದಲ್ಲಿ ಉಚಿತ ಹೈ-ಸ್ಪೀಡ್ ವೈ-ಫೈ ಸೇವೆಯನ್ನು ಆರಂಭಿಸಿದ್ದು, ಪ್ರಯಾಣಿಕರಿಂದ ಈ ಸೇವೆಗೆ ಧನಾತ್ಮಕ ಪ್ರತಿಕ್ರಿಯೆ ದೊರೆತ ಬೆನ್ನಲ್ಲೆ 15 ವಿವಿಧ ರೆಲ್ವೆ ನಿಲ್ದಾಣಕ್ಕೆ ವೈ-ಫೈ ಸೇವೆಯನ್ನು ವಿಸ್ತರಿಸುವುದಾಗಿ ಇಲಾಖೆ ಘೋಷಿಸಿದೆ.
ಹೈ-ಸ್ಪೀಡ್ ವೈ-ಫೈ ಸೇವೆಗೆ ಒಳಪಡಿಸುವಂತೆ ಚರ್ಚಗೇಟ್, ದಾದರ್ (ಪಶ್ಚಿಮ ಮತ್ತು ಮಧ್ಯ), ಬಾಂದ್ರಾ, ಅಂಧೇರಿ, ಬೊರಿವ್ಲಿ, ಬೈಕುಲ್ಲಾ, ಕುರ್ಲಾ, ಥಾಣೆ, ವಾಶಿ, ಕಲ್ಯಾಣ್, ಬೆಲಾಪೂರ್, ಪನ್ವೆಲ್ ಮತ್ತು ದೂರ ಪ್ರಯಾಣದ ಟರ್ಮಿನಿ-ಬಾಂದ್ರಾ ಟರ್ಮಿನಸ್ ಮತ್ತು ಲೋಕಮಾನ್ಯ ತಿಲಕ್ ಟರ್ಮಿನಸ್ ಜನನಿಬಿಡ ನಿಲ್ದಾಣಗಳ ಪಟ್ಟಿಯನ್ನು ಮುಖ್ಯಮಂತ್ರಿ ಕಚೇರಿಗೆ ಕಳುಹಿಸಲಾಗಿದೆ.
 
ಈ ನಿಲ್ದಾಣಗಳ ಪಟ್ಟಿಯನ್ನು ಭಾರತೀಯ ರೈಲ್ವೆ ದೂರಸಂಪರ್ಕ ವಿಭಾಗವಾಗಿರುವ ರೈಲ್‌ಟೆಲ್ ಸಿದ್ಧ ಪಡಿಸಿದೆ. ಸಿಎಸ್‌ಟಿ ಕೂಡ ವೈ-ಫೈ ಸೇವೆಯನ್ನು ಹೊಂದಿದೆ, ಆದರೆ ಈ ಸೇವೆ ಮೊದಲ 30 ನಿಮಿಷವರೆಗೂ ಮಾತ್ರ ಉಚಿತ ಸೇವೆ ನೀಡುತ್ತದೆ.
 
ಪ್ರಸಕ್ತ ವರ್ಷದ ಜನವರಿ ತಿಂಗಳಲ್ಲಿ ಗೂಗಲ್ ಸಹಯೋಗದೊಂದಿಗೆ ಭಾರತೀಯ ರೈಲ್ವೆ ಇಲಾಖೆ ಮುಂಬೈ ಸೆಂಟ್ರಲ್ ನಿಲ್ದಾಣದಲ್ಲಿ ಉಚಿತ ಹೈ-ಸ್ಪೀಡ್ ವೈ-ಫೈ ಸೇವೆಯನ್ನು ಆರಂಭಿಸಿತ್ತು. ಇಗ ಅದೆ ಯೋಜನೆಯ ಅಡಿಯಲ್ಲಿ 15 ರೈಲ್ವೆ ನಿಲ್ದಾಣದಲ್ಲಿ ವೈ-ಫೈ ಸೇವೆಯನ್ನು ಒದಗಿಸಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಫಾರೆಕ್ಸ್: ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ ಚೇತರಿಕೆ