Select Your Language

Notifications

webdunia
webdunia
webdunia
webdunia

ಫಾರೆಕ್ಸ್: ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ ಚೇತರಿಕೆ

ಫಾರೆಕ್ಸ್: ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ ಚೇತರಿಕೆ
ನವದೆಹಲಿ , ಮಂಗಳವಾರ, 3 ಮೇ 2016 (11:31 IST)
ಮುಂಬೈ: ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಬ್ಯಾಂಕುಗಳು ಮತ್ತು ರಫ್ತು ವಹಿವಾಟುದಾರರು ಡಾಲರ್ ಮಾರಾಟಕ್ಕೆ ಹೆಚ್ಚಿನ ಆಸಕ್ತಿ ತೋರಿದ್ದರಿಂದ ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ 13 ಪೈಸೆ ಏರಿಕೆ ಕಂಡು 66.31 ರೂಪಾಯಿ ಮೌಲ್ಯಕ್ಕೆ ತಲುಪಿದೆ.
ಸಾಗರೋತ್ತರ ಮಾರುಕಟ್ಟೆಗಳಲ್ಲಿ ವಿದೇಶಿ ಬಂಡವಾಳದ ಒಳಹರಿವು ಹೆಚ್ಚಳವಾದ ಪರಿಣಾಮ ರೂಪಾಯಿ ಮೌಲ್ಯದಲ್ಲಿ ಏರಿಕೆ ಕಂಡಿದೆ ಎಂದು ಮಾರುಕಟ್ಟೆ ವರ್ತಕರು ತಿಳಿಸಿದ್ದಾರೆ.
 
ಸೋಮವಾರದ ವಹಿವಾಟಿನ ಮುಕ್ತಾಯಕ್ಕೆ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಬ್ಯಾಂಕುಗಳು ಮತ್ತು ರಫ್ತು ವಹಿವಾಟುದಾರರು ಡಾಲರ್‌ಗಳ ಖರೀದಿಗೆ ಹೆಚ್ಚಿನ ಆಸಕ್ತಿ ತೋರಿದ್ದರಿಂದ ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ 11 ಪೈಸೆ ಕುಸಿತ ಕಂಡು 66.44 ರೂಪಾಯಿ ತಲುಪಿತ್ತು. 
 
ಏತನ್ಮಧ್ಯೆ ಶೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ಬಿಎಸ್‌ಇ ಸಂವೇದಿ ಸೂಚ್ಯಂಕ 166.41 ಪಾಯಿಂಟ್‌ಗಳಷ್ಟು ಏರಿಕೆ ಕಂಡು 25,603.38 ಅಂಕಗಳಿಗೆ ತಲುಪಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಾರ್ಥನೆ ಬರುವುದಿಲ್ಲವೆಂದು ಬಾಲಕನಿಗೆ ಹಿಗ್ಗಾಮುಗ್ಗಾ ಧಳಿಸಿದ ಚರ್ಚ್ ಫಾದರ್