Select Your Language

Notifications

webdunia
webdunia
webdunia
webdunia

77ನೇ ಸಾಹಿತ್ಯ ತೇರಿನಲ್ಲಿ ಭೋಜನದ ಅವ್ಯವಸ್ಥೆಗೆ ಆಕ್ರೋಶ

77ನೇ ಸಾಹಿತ್ಯ ತೇರಿನಲ್ಲಿ ಭೋಜನದ ಅವ್ಯವಸ್ಥೆಗೆ ಆಕ್ರೋಶ
ಬೆಂಗಳೂರು , ಶುಕ್ರವಾರ, 4 ಫೆಬ್ರವರಿ 2011 (17:32 IST)
77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವುದು ಒಂದು ಕಡೆಯಾದರೆ, ಊಟದ ವ್ಯವಸ್ಥೆ ಇನ್ನೊಂದು ಕಡೆ. ಏತನ್ಮಧ್ಯೆ ಸಮ್ಮೇಳನಕ್ಕೆ ನಿರೀಕ್ಷೆ ಮೀರಿ ಜನರು ಆಗಮಿಸಿದ ಹಿನ್ನೆಲೆಯಲ್ಲಿ ಊಟೋಪಚಾರದಲ್ಲಿ ಸಾಕಷ್ಟು ಅವ್ಯವಸ್ಥೆ ಉಂಟಾಗುವ ಮೂಲಕ ಗೊಂದಲದ ವಾತಾವರಣ ಸೃಷ್ಟಿಯಾಯಿತು.

ಅಲ್ಲದೇ ರಾಜ್ಯದ ವಿವಿಧ ಪ್ರದೇಶಗಳಿಂದ ಬಂದ ಪ್ರತಿನಿಧಿಗಳಿಗೆ ವಸತಿ ವ್ಯವಸ್ಥೆ ಒಂದೆಡೆಯಾದರೆ, ಉಪಹಾರ ಮತ್ತು ಭೋಜನಕ್ಕೆ ಮತ್ತೊಂದೆಡೆ ವ್ಯವಸ್ಥೆ ಮಾಡಿರುವುದು ಅಸಮಾಧಾನಕ್ಕೆ ಎಡೆಮಾಡಿಕೊಟ್ಟಿತ್ತು. ಬಹುತೇಕ ಎಲ್ಲ ಸಮ್ಮೇಳನಗಳಲ್ಲಿಯೂ ಉಪಹಾರ ಮತ್ತು ಭೋಜನದ ವ್ಯವಸ್ಥೆ ಸಮ್ಮೇಳನ ನಡೆಯುವ ಸ್ಥಳದಲ್ಲೇ ಮಾಡುವುದು ವಾಡಿಕೆ. ಆದರೆ ನಗರದಲ್ಲಿ ನಡೆದಿರುವ ಸಮ್ಮೇಳನದ ಸ್ಥಳದಿಂದ ಸುಮಾರು ಒಂದೂವರೆ ಕಿಲೋ ಮೀಟರ್‌ನಷ್ಟು ದೂರವಿರುವ ಹಳೆಕೋಟೆ ಮೈದಾನ, ಉದಯಭಾನು ಕಲಾ ಸಂಘದ ಆಟದ ಮೈದಾನ, ಮಹಿಳಾ ಸಮಾಜದಲ್ಲಿ ಏರ್ಪಡಿಸಿರುವುದು ವಯೋವೃದ್ಧರು, ಮಹಿಳೆಯರು ಆಕ್ರೋಶಕ್ಕೆ ಕಾರಣವಾಯಿತು.

ಉದಯಭಾನು ಕಲಾ ಸಂಘದ ಆಟದ ಮೈದಾನದಲ್ಲಿ ಸುಮಾರು 25 ಸಾವಿರ ಮಂದಿಗೆ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಆದರೆ ಜನರು ಅದಕ್ಕಿಂತ ದುಪ್ಪಟ್ಟಾಗಿ ಆಗಮಿಸಿದ ಹಿನ್ನೆಲೆಯಲ್ಲಿ ಸರಿಯಾದ ಊಟೋಪಚಾರದ ಇಲ್ಲದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಘಟನೆ ನಡೆಯಿತು. ಹೆಚ್ಚುವರಿ ಜನ ಆಗಮಿಸಿದರೆ ಬದಲಿ ವ್ಯವಸ್ಥೆ ಮಾಡಿಕೊಳ್ಳದಿರುವುದು ಈ ಸಮಸ್ಯೆಗೆ ಕಾರಣ ಎಂದು ಸಾಹಿತ್ಯಾಸಕ್ತರು ದೂರಿದ್ದಾರೆ.

Share this Story:

Follow Webdunia kannada