Select Your Language

Notifications

webdunia
webdunia
webdunia
webdunia

ಸದ್ಗುರು ಜಗ್ಗಿ ವಾಸುದೇವ್ ಅವರ 'ಆಧ್ಯಾತ್ಮಿಕ ಸಾಧ್ಯತೆಗಳು'

ಸದ್ಗುರು ಜಗ್ಗಿ ವಾಸುದೇವ್ ಅವರ 'ಆಧ್ಯಾತ್ಮಿಕ ಸಾಧ್ಯತೆಗಳು'
WD
ಸದ್ಗುರು ಜಗ್ಗಿ ವಾಸುದೇವ್‌ ಅವರ 'YOU -ಸದ್ಗುರು ಜಗ್ಗಿ ವಾಸುದೇವ್‌ : ಏ ಸ್ಪಿರಿಚುಯಲ್‌ ಪಾಸಿಬಲಿಟಿ ' ಪುಸ್ತಕದ ಲೋಕಾರ್ಪಣೆ ಸಮಾರಂಭ ಸೆಪ್ಟೆಂಬರ್‌ 20 ರಂದು ಮುಂಬೈನ ಷಣ್ಮುಖಾನಂದ ಸಭಾಂಗಣದಲ್ಲಿ ನಡೆಯಲಿದ್ದು, ಖ್ಯಾತ ಚಿತ್ರ ನಟ, ಸಮಾಜ ಸೇವಾ ಕಾರ್ಯಕರ್ತ ಅನುಪಮ್‌ ಖೇರ್‌ ಕೃತಿಯನ್ನು ಬಿಡುಗಡೆ ಮಾಡಲಿದ್ದಾರೆ.

ಈ ಕಾರ್ಯಕ್ರಮದ ಅಂಗವಾಗಿ ಈಶ ಪ್ರತಿಷ್ಠಾನದ 'ಲೈಫ್‌ ಅಂಡ್‌ ಡೆತ್‌ ಇನ್‌ ಒನ್‌ ಬ್ರೀಥ್‌ ' ಎಂಬ ಹೊಸ ಪುಸ್ತಕವನ್ನು ಅಂತರ್ಜಾಲದಲ್ಲಿ ಇ -ಪುಸ್ತಕ ಮಾದರಿಯಲ್ಲಿ ಬಿಡುಗಡೆ ಮಾಡಲಾಗುತ್ತದೆ.

ಬರಹಗಾರ್ತಿ ಪಲ್ಲವಿ ಗುಪ್ತ ಅವರು 'YOU', ಯೋಗಿ ಸದ್ಗುರು ಅವರ ಜೀವನದ ಪ್ರಭೆಯನ್ನು ಸರಣಿ ಭಾವಚಿತ್ರಗಳಲ್ಲಿ ಸೆರೆ ಹಿಡಿದು ಆ ಮೂಲಕ ಓದುಗನನ್ನೂ ಸದ್ಗುರುಗಳ ಜೀವನ ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದಾರೆ. ಸದ್ಗುರು ಜಗ್ಗಿ ವಾಸುದೇವ್‌ ಅವರ ಬಾಲ್ಯ, ಯೌವನ, ಮೋಟಾರ್‌ ಬೈಕ್‌ ಓಡಿಸುತ್ತಿರುವ ಒಬ್ಬ ತರುಣ, ಒಬ್ಬ ಸಂಸಾರಿ, ಧ್ಯಾನಲಿಂಗವನ್ನು ಪ್ರತಿಭಟನೆ ಮಾಡಿದ ಯೋಗಿ, ಇಂದಿನ ಆಧುನಿಕ ಅನುಭಾವಿಯ ತನಕ, ಹಿಮಾಲಯದ ಬೆಟ್ಟಗಳಲ್ಲೂ, ಅಂತಾರಾಷ್ಟ್ರೀಯ ಸಮಾವೇಶದಲ್ಲೂ, ಒಂದೇ ರೀತಿಯ ನಿಶ್ಚಿಂತೆಯ ಭಾವ ತೋರುವ ಹಲವಾರು ಚಿತ್ರಗಳ ಮೂಲಕ ಸದ್ಗುರುಗಳ ಜೀವನ‌ದ ವಿವಿಧ ಮಗ್ಗುಲುಗಳನ್ನು ತೆರೆದಿಟ್ಟಿದ್ದಾರೆ.

'ಯೋಗಿಯೊಂದಿಗೆ ಸಂಭಾಷಣೆಗಳು' ಕೃತಿ ಒಂದು ವಿಶಿಷ್ಟವಾದ ಸಂಭಾಷಣೆಗಳ ಸರಣಿಯಾಗಿದ್ದು, ಇದರಲ್ಲಿ ವಿವಿಧ ರಂಗಗಳ ಪ್ರಖ್ಯಾತ ವ್ಯಕ್ತಿಗಳು ಸದ್ಗುರು ಅವರೊಡನೆ ಬೇರೆ ಬೇರೆ ವಿಷಯಗಳ ಕುರಿತು ಚರ್ಚಿಸುತ್ತಾರೆ. ಬದುಕಿನ ಆಳವಾದ ಆಯಾಮಗಳನ್ನು ತಮ್ಮ ವಿಶಿಷ್ಟವಾದ ಶೈಲಿಯಲ್ಲಿ ತೆರೆದಿಡುತ್ತಾ, ಆಧುನಿಕ ಹಾಗೂ ಅನುಭಾವಿಕ ವಿಷಯಗಳ ನಡುವೆ ಒಂದು ಸೇತುವೆಯನ್ನು ತಮ್ಮ ಎಂದಿನ ಹಾಸ್ಯ ಭರಿತ ಕತೆಗಳೊಂದಿಗೆ ಹೇಳುತ್ತಾರೆ.

ಈ ಸಂಭಾಷಣೆಗಳ ಸರಣಿಯಲ್ಲಿ ಮೊದಲನೆಯದಾಗಿ ಪ್ರಶಸ್ತಿ ವಿಜೇತ ಸಿನಿಮಾ ನಿರ್ದೇಶಕ ಶೇಖರ್ ಕಪೂರ್ ಅವರು ಪ್ರೇಮ, ಬದುಕು ಮತ್ತು ಉತ್ಕಟವಾದ ಬಯಕೆಯ ಕುರಿತು ಸದ್ಗುರುಗಳ ಜೊತೆ ಸಂಭಾಷಣೆ ನಡೆಸಿದ್ದರು. ಕವಯಿತ್ರಿ ಹಾಗೂ ಬರಹಗಾರ್ತಿ ಅರುಂಧತಿ ಸುಬ್ರಹ್ಮಣ್ಯಂ ಮತ್ತು ಕ್ಯಾಲಿಫೋರ್ನಿಯಾದ ವೇಗದ ಕಾರು ರೇಸ್‌ನ ಪ್ರತಿಸ್ಪರ್ಧಿಯಾದ ಕ್ರಿಸ್‌ ರಾಡೋ ೀ ಸಂಭಾಷಣೆಯನ್ನು ಮುಂದುವರಿಸಿದ್ದರು.

ಆಧುನಿಕ ಯುಗದ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗುವ ಸದ್ಯರು ಜಗ್ಗಿ ವಾಸುದೇವ್‌ ಅವರು ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುತ್ತಾರೆ. ಆಳವಾದ ಅಂತರ್‌ಜ್ಞಾನ, ಮತ್ತು ವ್ಯವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಲೋಕೋಪಯುಕ್ತ ಸಲಹೆಗಳು, ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎಂಬುದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೇ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನೂ ನೆನಪಿಸುತ್ತದೆ.

ಮೂರು ದಶಕಗಳ ಹಿಂದೆ ಸದ್ಗುರು ಸ್ಥಾಪಿಸಿದ ಸ್ವಯಂಸೇವಾ ಸಂಸ್ಥೆ ಈಶ ಪ್ರತಿಷ್ಠಾನದ ಮುಖ್ಯ ಧ್ಯೇಯವೇ ತನ್ನ ಸಶಕ್ತ ಆಧ್ಯಾತ್ಮಿಕ ಕ್ರಾಂತಿಯ ಮೂಲಕ ಮಾನವ ಸಾಧ್ಯತೆಗಳನ್ನು ಪೋಷಿಸಿ ಬೆಳೆಸುವುದು.

ಯೋಗಿಯೊಡನೆ ಸಂಭಾಷಣೆಗಳು ಕಾರ್ಯಕ್ರಮದ ಈ ಭಾಗದಲ್ಲಿ ನಟ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಅನುಪಮ್‌ ಖೇರ್ ಅವರು ಸದ್ಗುರು ಅವರೊಡನೆ ಅಂತರ್ಜಾಲದಲ್ಲಿ ಬಂದಂತಹಾ ಪ್ರಶ್ನೆಗಳನ್ನು ಕೇಳುತ್ತಾರೆ.

ಈ ಕೃತಿಯ ಕುರಿತು ಅಭಿಪ್ರಾಯಪಟ್ಟಿರುವ ಲೇಖಕಿ ಪಲ್ಲವಿ ಗುಪ್ತ 'ಇಂತಹಾ ನಂಬಲಸಾಧ್ಯವಾದ ಆಯಾಮಗಳ ಬದುಕಿನ ಮೇಲೆ ಒಂದು ಪುಸ್ತಕವನ್ನು ರಚಿಸುತ್ತಿರುವುದು ಒಬ್ಬ ಬರಹಗಾರ್ತಿಯಾಗಿ ನನ್ನ ಅದೃಷ್ಟ ' ಎಂದು ಹೇಳಿದ್ದಾರೆ.

Share this Story:

Follow Webdunia kannada