ಶಾಲೆಯಲ್ಲಿ ವಿಜ್ಞಾನ ತರಗತಿಯಲ್ಲಿ ಮೂರು ಹುಳುಗಳನ್ನು ಮೂರು ಬೇರೆ ಬೇರೆ ಜಾರ್‌ನಲ್ಲಿ ಇಟ್ಟಿದ್ದರು. ಮೊದಲ ಹುಳುವನ್ನು ಅಲ್ಕೊಹಾಲ್ ಇರುವ ಜಾರ್‌ನಲ್ಲಿ ಹಾಕಿದ್ದರು. ಎರಡನೇ ಹುಳುವನ್ನು ಸಿಗರೇಟ್ ಹೊಗೆ ಇರುವ ಜಾರ್‌ನಲ್ಲಿ ಇಡಲಾಗಿತ್ತು. ಮೂರನೇ ಹುಳುವನ್ನು ಮಣ್ಣಿರುವ ಜಾರ್‌ನಲ್ಲಿ ಹಾಕಿದ್ದರು. ಒಂದು ದಿನದ ನಂತರ ಫಲಿತಾಂಶಗಳು ಹೀಗಿದ್ದವು - ಅಲ್ಕೊಹಾಲ್‌ನಲ್ಲಿದ್ದ ಹುಳು ಸತ್ತಿತ್ತು. ಸಿಗರೇಟ್ ಹೊಗೆಯಲ್ಲಿದ್ದ ಹುಳುವೂ ಸತ್ತಿತ್ತು. ಮಣ್ಣಿನಲ್ಲಿದ್ದ ಹುಳು ಮಾತ್ರ ಜೀವಂತವಾಗಿತ್ತು. ವಿಜ್ಞಾನ ಟೀಚರ್ ವಿದ್ಯಾರ್ಥಿಗಳಲ್ಲಿ 'ಈ ಪ್ರಯೋಗದಿಂದ ನೀವು ಏನು ತಿಳಿದುಕೊಂಡಿರಿ?' ಎಂದು ಕೇಳಿದರು. ಪುಟ್ಟ ಜಾನಿ ಬೇಗನೆ ಎದ್ದು ನಿಂತು 'ಯಾವತ್ತಿನವರೆಗೆ ನೀವು ಕುಡಿತೀರಿ ಮತ್ತು ಸಿಗರೇಟ್ ಸೇದುತ್ತೀರೊ ಆವತ್ತಿನವರೆಗೆ ನಿಮ್ಮ ಹೊಟ್ಟೆಯಲ್ಲಿ ಹುಳುಗಳಿರುವುದಿಲ್ಲ' ಎಂದು ಉತ್ತರಿಸಿದನು.