"ಸಣ್ಣ ಹುಡುಗ ಕತ್ತಲೆಗೆ ತುಂಬಾ ಹೆದರುತ್ತಿದ್ದ. ಒಂದು ರಾತ್ರಿ ಅವನ ತಾಯಿ ಹೊರಗಿರುವ ಪೊರಕೆಯನ್ನು ತಂದುಕೊಡು ಎಂದು ಹೇಳಿದಳು. ಅದಕ್ಕೆ ಹುಡುಗ 'ಹೊರಗೆ ಕತ್ತಲಿದೆ ನಾನು ಹೋಗಲ್ಲ' ಎಂದನು. ಆಗ ತಾಯಿ(ನಗುತ್ತಾ) 'ಹೆದರಬೇಡ. ಹೊರಗಡೆ ದೇವರಿದ್ದಾನೆ. ನಿನ್ನನ್ನು ಕಾಪಾಡುತ್ತಾನೆ. ನಿನಗೆ ಏನಾದರೂ ಸಹಾಯ ಬೇಕಾದರೆ ಮಾಡುತ್ತಾನೆ' ಎಂದು ವಿವರಿಸಿದಳು.
ಹುಡುಗ ಸ್ವಲ್ಪ ಹೊತ್ತು ಯೋಚಿಸಿ, ಬಾಗಿಲ ಹತ್ತಿರ ಹೋಗಿ ಬಾಗಿಲಲ್ಲಿ ಸಣ್ಣ ರಂಧ್ರ ಮಾಡಿ, ಅದರ ಮೂಲಕ 'ದೇವರೇ, ನೀನು ಹೊರಗೆ ಇದ್ದೀಯಾ, ಅಲ್ಲಿರುವ ಪೊರಕೆಯನ್ನು ನನ್ನ ಕೈಗೆ ಕೊಡುತ್ತೀಯಾ?' ಎಂದು ಕೇಳಿದನು.""
"