ಆತನ ಹೆಂಡತಿ ತೀರಿಕೊಂಡಿದ್ದಳು. ಶವಯಾತ್ರೆ ಇಕ್ಕಟ್ಟಾದ ಸಂಧಿಯಲ್ಲಿ ಸಾಗುತ್ತಿರುವಾಗ ಶವಪೆಟ್ಟಿಗೆಗೆ ಗೋಡೆ ತಾಗಿ ಮುಚ್ಚಳ ತೆರೆದುಕೊಂಡಿತು. ಪಕ್ಕನೆದ್ದು ಬಿಟ್ಟಳು ಹೆಂಡತಿ... ಅವಳು ಸತ್ತಿರಲಿಲ್ಲ...!
ಕೆಲ ದಿನಗಳ ನಂತರ ಆಕೆ ಮತ್ತೊಮ್ಮೆ ಸತ್ತಳು. ಶವಯಾತ್ರೆ ಸಾಗುತ್ತಿರುವಾಗ ಈ ಬಾರಿ ಗಂಡ ಹೇಳಿದ, 'ಹುಷಾರು, ಗೋಡೆಗೆ ತಾಗಿಸಬೇಡಿ'..!