"ಕುಡುಕನೊಬ್ಬ ಮಧ್ಯರಾತ್ರಿ ಸ್ಮಶಾನದ ಗುಂಡಿಯೊಳಗೆ ಬಿದ್ದು, ಚಳಿ ತಾಳೋಕಾಗ್ತಾ ಇಲ್ಲ…ಯಾರದರೂ ಬನ್ನಿ’ ಎಂದು ಕೂಗುತ್ತಾ ಇದ್ದ.
ಇನ್ನೊಬ್ಬ ಕುಡುಕ ಬಂದು ಕೆಳಗೆ ಬಾಗಿ ನೋಡಿ…'ಚಳಿಯಾಗದೆ ಇನ್ನೇನಾದೀತು? ಮೂರ್ಖರು! ನಿನ್ನನ್ನು ಗೋರಿಗೆ ಇಳಿಸಿದ ಮೇಲೆ ಮಣ್ಣು ಮುಚ್ಚಲು ಮರೆತು ಬಿಟ್ಟಿದ್ದಾರೆ' ಎಂದು ಗೋರಿಗೆ ಮಣ್ಣು ತುಂಬತೊಡಗಿದ.
"