ಪಕ್ಕದಲ್ಲಿದ್ದ ಸ್ಮಶಾನಕ್ಕೆ ಬೇಲಿ ಇರಲಿಲ್ಲ. ಒಮ್ಮೆ ಆ ಊರಿನ ಪಟೇಲರು ತಿಮ್ಮನನ್ನು ಕರೆದು ನೋಡು ತಿಮ್ಮ ನಮ್ಮೂರಿನ ಸ್ಮಶಾನಕ್ಕೆ ಬೇಲಿಯೇ ಇಲ್ಲ. ನೀವೆಲ್ಲಾ ಸೇರಿ ಮನಸ್ಸು ಮಾಡಿದರೆ ಒಂದು ಬೇಲಿ ನಿರ್ಮಿಸುವುದು ಕಷ್ಟವೇನಲ್ಲ ಎಂದು ಹೇಳಿದರು.
ತಿಮ್ಮನಿಗಂತೂ ಸಖತ್ ಕನ್ಫ್ಯೂಸ್. ಅಲ್ಲಾ ಸ್ವಾಮಿ ಹೊರಗೆ ಹೋದವರು ಒಳಗೆ ಬರಲ್ಲ ಒಳಗೆ ಹೋದವರು ಹೊರಗೆ ಬರಲ್ಲ ಮತ್ಯಾಕೆ ಸ್ಮಶಾನಕ್ಕೆ ಬೇಲಿ ಎಂದು ತನ್ನ ಸಂದೇಹವನ್ನು ಪಟೇಲರ ಮುಂದಿಟ್ಟ.