ಒಂದು ರಾತ್ರಿ ಗುಂಡನಿಂದ ಪೊಲೀಸ್ ಸ್ಟೇಷನ್ನಿಗೆ ಪೋನ್ ಬಂತು. "ನನ್ನ ಕಾರಿನ ಕ್ಲಚ್, ಬ್ರೇಕ್ ಮತ್ತು ಸ್ಟೇರಿಂಗ್ ಕಾಣೆಯಾಗಿದೆ" ಎಂದು ಹೇಳಿದ. ಕಳ್ಳನನ್ನು ಶೀಘ್ರವೇ ಹಿಡಿಯುವುದಾಗಿ ಪೊಲೀಸರು ಭರವಸೆ ನೀಡಿದರು. ಮತ್ತೆ ಸ್ವಲ್ಪ ಸಮಯದ ನಂತರ ಗುಂಡನಿಂದ ಪೋನ್- "ಸಾರ್ ಚಿಂತಿಸುವ ಅಗತ್ಯವಿಲ್ಲ. ನಾನೇ ತಿಳಿಯದೆ ಕಾರಿನ ಹಿಂದಿನ ಸಿಟಿನಲ್ಲಿ ಕುಳಿತು ಬಿಟ್ಟಿದ್ದೆ" ಎಂದ.