ಇಂಗ್ಲಿಷ್ ತರಗತಿಯಲ್ಲಿ ಶಿಕ್ಷಕರು ಪಾಠ ಮಾಡುತ್ತಿದ್ದರು. ಒಬ್ಬ ಹುಡುಗನಿಗೆ ಪಾಠದಲ್ಲಿ ಗಮನ ಇಲ್ಲದೇ ಇರುವುದನ್ನು ಗಮನಿಸಿದ ಶಿಕ್ಷಕರು 'ಪಪ್ಪು, ಈ ಎರಡು ವಾಕ್ಯಗಳನ್ನು ಜೋಡಿಸು. ನಾನು ಶಾಲೆಗೆ ಸೈಕಲ್‌ನಲ್ಲಿ ಹೋಗುತ್ತಿದ್ದೆ. ನಾನು ಒಂದು ಶವವನ್ನು ನೋಡಿದೆ.' ಏನನ್ನೊ ಯೋಚಿಸುತ್ತಿದ್ದ ಪಪ್ಪು ತುಂಬ ಗಡಿಬಿಡಿಯಿಂದ ಎಚ್ಚೆತ್ತು 'ನಾನು ಶವ ಸೈಕಲ್‌ನಲ್ಲಿ ಶಾಲೆಗೆ ಹೋಗುತ್ತಿರುವುದನ್ನು ನೋಡಿದೆ' ಎಂದು ಉತ್ತರಿಸಿದನು.