ಒಂದು ನಾಲ್ಕು ವರ್ಷದ ಮಗು ಕಾರಿ ಹಿಂದಿನ ಸೀಟಿನಲ್ಲಿ ಕುಳಿತುಕೊಂಡು ಸೇಬು ಹಣ್ಣು ತಿನ್ನುತ್ತಿತ್ತು. ಆಗ ಡ್ರೈವ್ ಮಾಡುತ್ತಿದ್ದೆ ತಂದೆಯಲ್ಲಿ 'ಅಪ್ಪಾ, ನನ್ನ ಸೇಬು ಯಾಕೆ ಕಂದು ಬಣ್ಣಕ್ಕೆ ತಿರುಗುತ್ತಿದೆ?' ಎಂದು ಕೇಳಿತು. ತಂದೆ 'ನೀನು ತಿಂದ ನಂತರ ಸೇಬು ಹಣ್ಣಿನ ಒಳಭಾಗ ಗಾಳಿಗೆ ತೆರೆದುಕೊಳ್ಳುತ್ತದೆ. ಆಗ ಅದು ಆಕ್ಸಿಡೈಸ್ ಆಗುತ್ತದೆ. ಆದ್ದರಿಂದ ಅದರ ರಾಸಾಯನಿಕ ಕಣಗಳು ಬೇರೆ ಬಣ್ಣಕ್ಕೆ ತಿರುಗುತ್ತದೆ' ಎಂದು ವಿವರಿಸಿದನು. ತುಂಬಾ ಹೊತ್ತು ಹಾಗೇ ಸುಮ್ಮನಿದ್ದ ಮಗು ನಂತರ ನಿಧಾನವಾಗಿ 'ಅಪ್ಪಾ, ನೀನು ನನ್ನೊಂದಿಗೇ ಮಾತನಾಡುತ್ತಿದ್ದೀಯಾ?' ಎಂದು ಕೇಳಿತು.