ಸೇಲ್ಸ್ ಎಜೆಂಟ್, ಕ್ಲರ್ಕ್ ಮತ್ತು ಬಾಸ್ ಜೊತೆಯಾಗಿ ಊಟಕ್ಕೆ ಹೊಗುತ್ತಿರುವಾಗ, ಒಂದು ಹಳೆಯ ಎಣ್ಣೆಯ ಬಾಟಲಿನಿಂದ ಬೇತಾಳವು ಹೊರಗೆ ಬಂದು, "ನಿಮ್ಮ ಮೂವರಿಗೂ ಒಂದೊಂದು ವರವನ್ನು ನೀಡುತ್ತೇನೆ, ಕೇಳಿ" ಎಂದಿತು. "ನಾನು ಮೊದಲು! ನಾನು ಮೊದಲು!" ಎಂದ ಕ್ಲರ್ಕ್, "ನನಗೆ ನನ್ನದೇ ಪ್ರಪಂಚದಲ್ಲಿ ಮೆರೆಯಬೇಕು. ಹಣ, ಆರೋಗ್ಯವನ್ನು ನೀಡು" ಎಂದಿತು. ಬೇತಾಳವು ಒಪ್ಪಿತು. "ನಾನು! ನಾನು!" ಎಂದ ಸೇಲ್ಸ್ ಎಜೆಂಟ್, "ನನಗೆ ಹವಾಯಿಯಲ್ಲಿ, ಬೀಚ್‌ನಲ್ಲಿ ಎಲ್ಲಾ ವ್ಯವಸ್ಥೆಯನ್ನು ಕರುಣಿಸು" ಎಂದಾಗ, ಅಸ್ತು ಎಂದಿತು ಬೇತಾಳ. ಕೊನೆಯದಾಗಿ ಬೇತಾಳವು ಬಾಸ್‌ನ ಕಡೆಗೆ ತಿರುಗಿ ನಿಮ್ಮ ಸರದಿ ಎಂದಾಗ, "ಊಟದ ನಂತರ ಇವರಿಬ್ಬರೂ ಆಫೀಸಿನಲ್ಲಿರಬೇಕು" ಎಂದನು.