ಒಂದು ದೊಡ್ಡ ಸುಪರ್ ಮಾರ್ಕೆಟ್ನಲ್ಲಿ, ಒಬ್ಬನಿಗೆ ಒಬ್ಬ ಸುಂದರ ಮಹಿಳೆಯ ಭೇಟಿಯಾಗಿ, "ಈ ಸೂಪರ್ ಮಾರ್ಕೆಟ್ನಲ್ಲಿ ನನ್ನ ಹೆಂಡತಿಯನ್ನು ನಾನು ಕಳೆದುಕೊಂಡಿದ್ದೇನೆ, ಕಾಣಿಸ್ತಿಲ್ಲ, ದಯವಿಟ್ಟು ನೀವು ನನ್ನೊಂದಿಗೆ ಸ್ವಲ್ಪ ಕಾಲ ಮಾತಾಡುತ್ತಾ ನಿಲ್ಲುತ್ತೀರಾ" ಎಂದು ಕೇಳಿದನು. ಅವನ ಪ್ರಶ್ನೆಗೆ ಆಶ್ಚರ್ಯಗೊಂಡ ಸುಂದರ ಮಹಿಳೆ "ಯಾಕೆ" ಎಂದು ಪ್ರಶ್ನಿಸಿದಳು. ಅದಕ್ಕೆ ಉತ್ತರವಾಗಿ ಅವನು, "ಯಾಕೆಂದರೆ, ನಾನು ಯಾವಾಗಲೂ ಸುಂಗರ ಹುಡುಗಿಯೊಂದಿಗೆ ಮಾತನಾಡಲು ಪ್ರಾರಂಭಿಸಿದರೆ ನನ್ನ ಹೆಂಡತಿ ತಕ್ಷಣವೇ ಎಲ್ಲಿಂದಲೋ ಪ್ರತ್ಯಕ್ಷವಾಗುತ್ತಾಳೆ" ಎಂದನು.