ಬಿಹಾರದ ಪಾಟ್ನಾದಲ್ಲಿ ಒಂದು ದಿನ ಭರ್ಜರಿ ಟ್ರಾಫಿಕ್ ಜಾಮ್ ಉಂಟಾಯಿತು. ಮೋಟಾರ್ ಸೈಕಲ್ ಸವಾರನೊಬ್ಬ ಮುಂದಿನ ಸವಾರನನ್ನು ಕೇಳಿದಾಗ ಅವನು ಹೇಳಿದ "ಲಾಲೂ ಪ್ರಸಾದ್ ರೋಡಿನ ಮಧ್ಯೆ ನಿಂತಿದ್ದಾರೆ, ಮತ್ತು ಅಲ್ಲಿಂದ ಮುಂದೆ ಸರಿಯುತ್ತಿಲ್ಲ". ಮೊದಲ ಸವಾರ ಕೇಳಿದ " ಆದರೆ ಏಕೆ?". ಎರಡನೆಯವ ಉತ್ತರಿಸಿದ "ಲಾಲೂ ಚುನಾವಣೆಯಲ್ಲಿ ಸೋತಿದ್ದಾರೆ. ಇದೀಗ ಭ್ರಷ್ಟಾಚಾರ ಹಗರಣದಲ್ಲಿ ಅವರನ್ನು ಆರೋಪಿಯನ್ನಾಗಿಸುತ್ತಾರೆ ಎಂದು ಖಂಡಿತ ಅವರಿಗನಿಸಿದೆ ಮತ್ತು ಅದಕ್ಕಾಗಿ ಲಕ್ಷಾಂತರ ರೂಪಾಯಿ ಹಣ ಕಟ್ಟಬೇಕಾಗಬಹುದು ಎಂದು ಅವರಿಗನಿಸಿದೆ. ಅದಕ್ಕಾಗಿ ಜನರು ಅವರಿಗೆ ಹಣ ಸಹಾಯ ಮಾಡದಿದ್ದಲ್ಲಿ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುತ್ತಿದ್ದೀನೆಂದು ಬೆದರಿಕೆ ಹಾಕುತ್ತಿದ್ದಾರೆ". ಮೊದಲನೆಯವ ಕೇಳಿದ "ಹಾಗಾದರೆ ಇಲ್ಲಿಯವರೆಗೆ ಜನ ಎಷ್ಟು ಸಹಾಯ ಮಾಡಿದ್ದಾರೆ?" ಎರಡನೆಯವ ಹೇಳಿದ "ಐದು ಲೀಟರ್ ಸೀಮೆಎಣ್ಣೆ"!