ಒಬ್ಬ ಮಹಿಳೆ ಅವಳ ಮಗುವಿನೊಂದಿಗೆ ಬಸ್ ಹತ್ತಿದಳು. ಬಸ್ ಚಾಲಕ ಆ ಮಗುವನ್ನು ನೋಡಿ 'ಉಫ್, ಇಷ್ಟು ಕೆಟ್ಟ ಮಗುವನ್ನು ನಾನು ಇದುರವರೆಗೆ ನೋಡೇ ಇಲ್ಲ' ಎಂದು ಹೇಳಿದನು. ಬೇಸರಗೊಂಡ ಆ ಮಹಿಳೆ ಚಾಲಕನನ್ನು ಬೈಯುತ್ತಾ ಸೀಟು ಹಿಡಿದು ಕುಳಿತುಕೊಂಡಳು. ಹತ್ತಿರ ಕುಳಿತ ವ್ಯಕ್ತಿಯಲ್ಲಿ 'ಆ ಚಾಲಕ ನನ್ನನ್ನು ಅವಮಾನ ಮಾಡಿದ' ಎಂದಳು. ಆ ವ್ಯಕ್ತಿ 'ಅವನನ್ನು ಹಾಗೇ ಬಿಡಬಾರದು. ನೀವು ಹೋಗಿ ಅವನಿಗೆ ಸರಿಯಾಗಿ ಬೈಯಿರಿ. ಅದುವರೆಗೆ ನಾನು ನಿಮ್ಮ ಕೋತಿಯನ್ನು ಹಿಡಿದುಕೊಳ್ಳುತ್ತೇನೆ' ಎಂದನು.