"ಟೀಚರ್ ತರಗತಿಗೆ ಬಂದಾಗ ಎಲ್ಲಾ ವಿದ್ಯಾರ್ಥಿಗಳೂ ಎದ್ದು ನಿಂತು ಗೌರವ ತೋರಿಸಿದರು. ಆಗ
ಟೀಚರ್: ಸರಿ ಎಲ್ಲರೂ ಕುಳಿತುಕೊಳ್ಳಿ. ಆದರೆ ಯಾರೆಲ್ಲ ನಿಜವಾಗಲೂ ಮೂರ್ಖರು ಅವರು ಮಾತ್ರ ಕುಳಿತುಕೊಳ್ಳಬಾರದು ನಿಂತುಕೊಳ್ಳಬೇಕು.
ಎಲ್ಲರೂ ಕುಳಿಕುಕೊಂಡರೂ ರಾಜನ್ ಮಾತ್ರ ಕುಳಿತುಕೊಳ್ಳಲಿಲ್ಲ.
ಟೀಚರ್: ಯಾಕೆ ರಾಜನ್? ನೀನು ನಿಜವಾಗಲೂ ಮೂರ್ಖನಾ?
ರಾಜನ್: ಇಲ್ಲ ಮೇಡಂ. ವಿಷಯ ಏನೆಂದರೆ ನೀವು ಒಬ್ಬರೇ ನಿಂತಿದ್ದೀರಲ್ಲ ಮೇಡಂ ಅದು ನನಗೆ ಸರಿಕಾಣಲಿಲ್ಲ."