ತನ್ನ ಕತ್ತೆಯನ್ನು ಕಳೆದುಕೊಂಡಿದ್ದ ರಾಮ ದೇವರಿಗೆ ಧನ್ಯವಾದ ತಿಳಿಸುತ್ತಿದ್ದ.
ಇದನ್ನು ನೋಡಿದ ರಾಮನ ಗೆಳೆಯ ನಿನ್ನ ಕತ್ತೆ ಕಳೆದು ಹೋಗಿದೆ ಮತ್ಯಾಕೆ ನೀನು ದೇವರಿಗೆ ಧನ್ಯವಾದ ಹೇಳುತ್ತಿದ್ದಿ ಎಂದು ಕೇಳಿದ.
ಆಗ ರಾಮ, ಸದ್ಯ ಕತ್ತೆ ಕಳೆದುಹೋದಾಗ ನಾನು ಕತ್ತೆ ಮೇಲಿರಲಿಲ್ಲವಲ್ಲ ಅದು ನನ್ನ ಪುಣ್ಯ ಎಂದು ಖುಷಿಯಿಂದ ಹೇಳಿದ.