ಹೊಸದಾಗಿ ಮದುವೆಯಾದ ಹುಡುಗಿಯೊಬ್ಬಳು ಒಂದು ದಿನ ಆಫೀಸಿನಿಂದ ಮನೆಗೆ ಬಂದು ಗಂಡನಿಗೆ ಹೇಳಿದಳು "ನಿಮಗೊಂದು ಸಂತೋಷದ ಸುದ್ದಿಯಿದೆ, ಸದ್ಯದಲ್ಲಿಯೇ ನಮ್ಮ ಮನೆಯಲ್ಲಿ ಮತ್ತೊಬ್ಬರು ಆಗಮಿಸಲಿದ್ದಾರೆ". ಗಂಡನಿಗೆ ಅತ್ಯಂತ ಸಂತಸವಾಯಿತು, ಪತ್ನಿಯನ್ನು ಮುದ್ದಾಡುತ್ತಾ ಕೇಳಿದ, "ಹಾಗಾದರೆ, ನಾನು ಈ ಪ್ರಪಂಚದ ಅತ್ಯಂತ ಸಂತೋಷದ ವ್ಯಕ್ತಿಯಾಗಿರುತ್ತೇನೆ", ಆಗ ಪತ್ನಿಯು "ನೀವಿದನ್ನು ಹೇಳುವುದನ್ನು ಕೇಳಿ ನನಗೆ ಸಂತೋಷವಾಗುತ್ತಿದೆ, ಏಕೆಂದರೆ ನಾಳೆ ನನ್ನ ಅಮ್ಮ ಇಲ್ಲಿಗೆ ಬಂದು ನಮ್ಮೊಂದಿಗೆ ನೆಲೆಸಲಿದ್ದಾರೆ". ಗಂಡ ಅಲ್ಲಿಯೇ ಮೂರ್ಛೆ ಬಿದ್ದ.