ಒಂದು ಶಿಶುವಿಹಾರ ಸಂಸ್ಥೆಯ ಫೀಲ್ಡ್ ಟೂರ್‌ನ ಅಂಗವಾಗಿ ಸ್ಥಳೀಯ ಪೋಲೀಸ್ ಸ್ಟೇಶನ್‌ಗೆ ಭೇಟಿ ನೀಡಿತ್ತು. ಸ್ಟೇಶನ್‌ನಲ್ಲಿ ಬೇಕಾಗಿರುವ ಅಪರಾಧಿಗಳು ಎಂದು ಬೋರ್ಡ್ ಹಾಕಿ 10 ವ್ಯಕ್ತಿಗಳ ಫೋಟೋ ಹಾಕಿದ್ದರು. ಅದನ್ನು ನೋಡಿದ ಒಬ್ಬ ಸಣ್ಣ ಹುಡುಗ ಫೋಟೋದಲ್ಲಿರುವವರು ನಿಜವಾಗಲೂ ನಿಮಗೆ ಬೇಕೇ ಎಂದು ಕೇಳಿದನು. ಅದಕ್ಕೆ ಪೋಲೀಸ್ ಹೌದು ಎಂದನು. ಇದನ್ನು ಕೇಳಿದ ಹುಡುಗ 'ನೀವು ಫೋಟೋ ತೆಗೆಯುವಾಗ ಇದ್ದವನನ್ನು ಯಾಕೆ ಇಟ್ಟುಕೊಳ್ಳದೆ ಬಿಟ್ಟುಬಿಟ್ಟಿರಿ?'