ಅದೇ ಕಳ್ಳನನ್ನು ಮತ್ತೆ ಕೋರ್ಟ್‌ನಲ್ಲಿ ನೋಡಿದ ನ್ಯಾಯಧೀಶರಿಗೆ ಸಿಟ್ಟುಬಂತು. ಅಲ್ಲಯ್ಯ ಆರು ಮೂಟೆ ಅಕ್ಕಿ ಕದ್ದಿದ್ದಕ್ಕೆ ನಾನು ನಿನಗೆ ಒಂದು ತಿಂಗಳ ಶಿಕ್ಷೆ ಕೊಟ್ಟು ಕಳಿಸಿದ್ದೆ ಮತ್ತೆ ಬಂದಿದ್ದಿಯಲ್ಲಯ್ಯ, ಎಂದು ಪ್ರಶ್ನಿಸಿದರು.
ಕಳ್ಳ: ಆಗ್ಲೇ ಆರು ತಿಂಗಳಾಯ್ತು ಸ್ವಾಮಿ, ಅಕ್ಕಿ ಮುಗಿದು ಹೋಗಿತ್ತು. ಮತ್ತೆ ಕದಿಯಲು ಶುರುಮಾಡಿದೆ. ಆದರೆ ಈ ಪೊಲೀಸರು ಸುಮ್ನೆ ಬಿಡ್ತರಾ?.