ಒಬ್ಬ ಕಾಲೇಜು ಹುಡುಗಿ ಫೋನ್‌ನಲ್ಲಿ ತುಂಬಾ ಹೊತ್ತಿನಿಂದ ಮಾತನಾಡುತ್ತಿದ್ದಳು. ಅದನ್ನು ಅವಳ ತಂದೆಯೂ ನೋಡುತ್ತಿದ್ದರು. ಸುಮಾರು ಅರ್ಧ ಗಂಟೆ ಮಾತನಾಡಿದ ನಂತರ ಫೋನ್ ಇಟ್ಟು ಒಳಬಂದ ಮಗಳಲ್ಲಿ ತಂದೆ 'ಇವತ್ತು ತುಂಬಾ ಆಶ್ಚರ್ಯವಾಗಿದೆ. ಯಾವತ್ತೂ ಎರಡು ಗಂಟೆಯವರೆಗೆ ಮಾತನಾಡುವವಳು ಇವತ್ತೇನು ಬೇಗ ಮುಗೀತು ಏನಾಯಿತು?' ಎಂದು ಕೇಳಿದರು. ಮಗಳು 'ಅದು ವ್ರಾಂಗ್ ನಂಬರ್' ಎಂದಳು.