" ಮೂವರು ಗೆಳೆಯರು ಊಟಕ್ಕೆಂದು ಹೋಟೆಲಿಗೆ ಹೋದಾಗ, ತಿಂದು ಮುಗಿದ ನಂತರ ಕೊನೆಯಲ್ಲಿ ಬಿಲ್ ತಂದು ನೀಡಿದಾಗ, ಮೂವರೂ ತಮ್ಮ ಜೇಬಿನಿಂದ ಒಂದು ಸಾವಿರವನ್ನು ತೆಗದರು ಆದರೆ ಬಿಲ್ ಕೇವಲ ಆರು ನೂರು ಮಾತ್ರ ಆಗಿತ್ತು, ಅಲ್ಲದೆ ಉಳಿದ ಚೇಂಜ್ ಅನ್ನು ಕೂಡ ಕೇಳುವ ಮಾತುಕತೆ ಅವರಲ್ಲಿರಲಿಲ್ಲ. ಆದರೆ ಮೂರು ಗೆಳತಿಯರು ಊಟಕ್ಕೆ ಹೋದಾಗ, ಬಿಲ್ ಬಂದ ತಕ್ಷಣವೇ ಅವರವರ ಪಾಕೆಟ್ ಕ್ಯಾಲ್ಕುರೆಟರ್ ಹೊರಗೆ ಬರುತ್ತದೆ."