ಒಮ್ಮೆ ತರಗತಿಗೆ ಹೊಸದಾಗಿ ಬಂದ ಟೀಚರ್ ವಿದ್ಯಾರ್ಥಿಗಳ ಪರಿಚಯ ಮಾಡಿಕೊಂಡ ನಂತರ, ತಾನು ನಾಸ್ತಿಕಳು ಎಂದು ಬಹಳ ಹೆಮ್ಮೆಯಿಂದ ಹೇಳಿಕೊಂಡರು. ನಂತರ ವಿದ್ಯಾರ್ಥಿಗಳಲ್ಲೂ ನೀವು ನಾಸ್ತಿಕರಾ ಎಂದು ಕೇಳಿದರು. ಮಕ್ಕಳಿಗೆ ನಾಸ್ತಿಕ ಎಂಬುದರ ಬಗ್ಗೆ ಸರಿಯಾಗಿ ಗೊತ್ತಿಲ್ಲದಿದ್ದರೂ ಸಹ ಟೀಚರ್‌ನನ್ನು ಮೆಚ್ಚಿಸಲೆಂದು ಹೌದು ನಾವೂ ನಾಸ್ತಿಕರು ಎಂದು ಒಂದು ಹುಡುಗಿಯನ್ನು ಹೊರತುಪಡಿಸಿ ಉಳಿದವರೆಲ್ಲರೂ ಒಪ್ಪಿಕೊಂಡರು. ಆ ಹುಡುಗಿಯಲ್ಲಿಗೆ ಬಂದು ಟೀಚರ್ ಸಿಟ್ಟಿನಿಂದ 'ನೀನು ನಾಸ್ತಿಕಳಲ್ಲದಿದ್ದರೆ ಮತ್ತೇನು?' ಎಂದಳು. ಅದಕ್ಕೆ ಹುಡುಗಿ 'ನನ್ನ ತಂದೆ ತಾಯಿ ಕ್ರಿಶ್ಚಿಯನ್ ಹಾಗಾಗಿ ನಾನೂ ಕ್ರಿಶ್ಚಿಯನ್' ಎಂದುತ್ತರಿಸಿದಳು. ಇದರಿಂದ ಮತ್ತಷ್ಟು ಕೋಪಗೊಂಡ ಟೀಚರ್ 'ನಿನ್ನ ತಂದೆ ತಾಯಿ ಇಬ್ಬರೂ ಮಂದಬುದ್ಧಿಯವರಾಗಿದ್ದರೆ ನೀನು ಏನಾಗುತ್ತಿದ್ದೆ?' ಎಂದು ವ್ಯಂಗದಿಂದ ಕೇಳಿದರು. ಹುಡುಗಿ ನಗುತ್ತಾ 'ಆಗ ನಾನು ನಾಸ್ತಿಕಳಾಗುತ್ತಿದ್ದೆ'.