ರಾಸಾಯನಿಕ ಶಾಸ್ತ್ರದ ಪ್ರೊಫೆಸರ್ ಒಬ್ಬರು ಆಲ್ಕೋಹಾಲ್‌ನ ದುಷ್ಪರಿಣಾಮದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಲು ಬಯಸಿದರು. ಅವರು ಒಂದು ಗಾಜಿನ ಲೋಟದಲ್ಲಿ ನೀರು, ಒಂದು ಲೋಟ ವಿಸ್ಕಿ ಮತ್ತು ಎರಡು ಎರಡು ಹುಳಗಳನ್ನು ತಂದು ಪ್ರಯೋಗವನ್ನು ಪ್ರಾರಂಭಿಸುತ್ತಾ ವಿದ್ಯಾರ್ಥಿಗಳಿಗೆ ಹೇಳಿದರು, "ಎಲ್ಲರೂ ಗಮನವಿಟ್ಟು ನೋಡಿ". ಮೊದಲು ಪ್ರೊಫೆಸರ್ ಹುಳವೊಂದನ್ನು ಒಂದು ಗಾಜಿನ ಲೋಟ ನೀರಿಗೆ ಹಾಕಿದರು. "ನೋಡಿ ಹುಳವು ಎಷ್ಟು ಆನಂದವಾಗಿ ನೀರಿನಲ್ಲಿ ಈಜಾಡುತ್ತಿದೆ". ನಂತರ ಅವರು ಹುಳವೊಂದನ್ನು ವಿಸ್ಕಿಗೆ ಹಾಕಿದರು, ಹುಳವು ಒದ್ದಾಡುತ್ತಾ, ಕೆಲವೇ ನಿಮಿಷಗಳಲ್ಲಿ ಪ್ರಾಣಬಿಟ್ಟು ಲೋಟದ ಕೆಳಭಾಗ ಸೇರಿತು. ಈಗ ಪ್ರೊಫೆಸರ್ ಕೇಳಿದರು, "ಈ ಪ್ರಯೋಗದಿಂದ ನೀವು ಯಾವ ಪಾಠವನ್ನು ಕಲಿತಿರಿ ಮಕ್ಕಳೇ". ಹಿಂದಿನ ಬೆಂಚಿನಲ್ಲಿ ಕುಳಿತಿದ್ದ ಜಾನಿ ಉತ್ತರಿಸಿದ, "ವಿಸ್ಕಿ ಕುಡಿಯುವುದರಿಂದ ಹೊಟ್ಟೆಯಲ್ಲಿ ಹುಳಗಳಾಗುವುದನ್ನು ತಪ್ಪಿಸಬಹುದು".!!