ಓರ್ವ ಹೆದರಿಕೆಯ, ಮೊದಲ ಬಾರಿ ಅಪರಾಧಿಯ ವಿಚಾರಣೆಯ ನಡೆಯುತ್ತಿತ್ತು. ವಕೀಲರು ಗುಡುಗಿದರು "ನೀನು ಎಂದಾದರೂ ಮದುವೆ ಮಾಡಿಕೊಂಡಿದ್ದೆಯಾ?" ಆರೋಪಿಯು ಹೆದರಿಕೆಯಿಂದ, ಅಂಜುತ್ತಾ "ಹೌದು ಸರ್, ಒಂದು ಬಾರಿ" ಎಂದ. ವಕೀಲರು ಕೇಳಿದರು "ಯಾರನ್ನು ನೀನು ಮದುವೆಯಾಗಿದ್ದಿ" ಆರೋಪಿ ಹೇಳಿದ "ಮಹಿಳೆಯೊಬ್ಬಳನ್ನು". ವಕೀಲ ಸಿಟ್ಟಿನಿಂದ ಕೇಳಿದ " ನೀನು ಮದುವೆಯಾಗಿರುವುದು ಮಹಿಳೆಯೊಬ್ಬಳನ್ನು ಎನ್ನುವುದು ಗೊತ್ತು, ನೀನು ಎಂದಾದರೂ ಪುರುಷನನ್ನು ಮದುವೆಯಾಗುವುದನ್ನು ಕೇಳಿದ್ದೀಯಾ?" ಆರೋಪಿ ಹೇಳಿದ "ನನ್ನ ತಂಗಿ ಮಾಡಿಕೊಂಡಿದ್ದಳು". ಈಗ ಬೇಸ್ತು ಬೀಳುವ ಸರದಿ ವಕೀಲರದ್ದಾಗಿತ್ತು.