Article Jokes In Kannada %e0%b2%b5%e0%b2%be%e0%b2%b9%e0%b2%a8 110061800076_1.htm

Select Your Language

Notifications

webdunia
webdunia
webdunia
webdunia

ವಾಹನ

ಕನ್ನಡ ಜೋಕ್
ಸಂತಾಗೆ ಬೇಜಾರಾಗಿತ್ತು. ಯಾರು ನೋಡಿದ್ರೂ ತನ್ನ ಮೇಲೆ ಜೋಕ್ ಮಾಡ್ತಾರೆ, ದಡ್ಡ ಅಂತ ಹೇಳ್ತಾರೆ, ಹಾಗಾಗಿ ಎಲ್ಲಿಗಾದರೂ ಹೋಗಿ ಬಿಡಲು ತೀರ್ಮಾನಿಸಿದ - ಆಗಲೇ ಅವನಿಗೆ ಒಂದು ವಿಚಿತ್ರ ಜೀವಿಯ ಭೇಟಿಯಾಗಿದ್ದು, ಅಕರಾಳ-ವಿಕರಾಳ ಸ್ವರೂಪದ ಆ ಜೀವಿ, "ನಮ್ಮ ಲೋಕಕ್ಕೆ ಬರ್ತೀಯಾ?" ಅಂತ ಕೇಳಿದಾಗ ಸರ್ದಾರ್ಜಿಗೆ ಸಕತ್ ಸಂತೋಷ! ಅಲ್ಲಿ ನಮ್ಮನ್ನು ಯಾರೂ ಜೋಕ್ ಮಾಡುವುದಿಲ್ಲ ತಾನೆ? ಎಂದು ಕೇಳಿದ. "ಊಹೂಂ" ಎಂದಿತು ಜೀವಿ. ಸರಿ ಹಾಗದ್ರೆ ಬರ್ತೇನೆ ಎಂದ. "ಇನ್ನೂರು ರೂಪಾಯಿ ಕೊಡಿ, ನಮ್ಮ ಲೋಕಕ್ಕೆ ಟಿಕೆಟ್ ರಿಸರ್ವ್ ಮಾಡಿಸಬೇಕು ಎಂದಿತು ಜೀವಿ. ಬರೀ ಇನ್ನೂರು ರೂಪಾಯಿಗೆ ಬೇರೆ ಲೋಕಕ್ಕೆ ಪ್ರಯಾಣ! ಯಾರಿಗುಂಟು ಈ ಅದೃಷ್ಟ ಅಂತ ತನ್ನ ಬುದ್ಧಿವಂತಿಕೆಯನ್ನು ಹೊಗಳಿಕೊಳ್ಳುತ್ತಾ ನೂರರ ಎರಡು ನೋಟು ಕೊಟ್ಟ. ನಾಳೆ ಸಂಜೆ ನಾಲ್ಕು ಗಂಟೆಗೆ ನಮ್ಮ ವಾಹನ ಊರ ಹೊರಗಿರೋ ಬಯಲಿನಿಂದ ಹೊರಡುತ್ತದೆ, ನೀವು ಅಲ್ಲಿಗೆ ಬಂದುಬಿಡಿ ಎಂದ ಜೀವಿ ಅಲ್ಲಿಂದ ಕಾಲ್ಕಿತ್ತಿತ್ತು. ಮರುದಿವಸ ಸಂಟಾ ಟೈಂಗೆ ಸರಿಯಾಗಿ ಬಂದು ನಿಂತ ಪರಲೋಕದ ವಾಹನಕ್ಕಾಗಿ ಆಕಾಶದ ಕಡೆ ಮುಖ ಎತ್ತಿ. ಕಾದ....ಕಾದ...ಸಂಜೆ ಆರರ ತನಕ ಕಾದ. ಆಗ ಅವನಿಗೆ ಮೋಸಹೋದದ್ದು ಅರಿವಾಯಿತು. ಸದ್ಯ! ಇದು ಯಾರಿಗೂ ಗೊತ್ತಿಲ್ಲವಲ್ಲ ಅಂತ ನೆಮ್ಮದಿಯಿಂದ ಹಿಂದೆ ತಿರುಗಿ ನೋಡಿದ. ಅಲ್ಲಿ! ಸಾವಿರಾರು ಸರ್ದಾರ್ಜಿಗಳು ಎಲ್ಲ ಆಕಾಶದಿಂದ ಇಳಿವ ವಾಹನದ ನೀರೀಕ್ಷೆಯಲ್ಲೇ ಮುಖ ಎತ್ತಿ ನಿಂತಿದ್ದರು.

Share this Story:

Follow Webdunia kannada