Article Jokes In Kannada %e0%b2%b5%e0%b2%be%e0%b2%b5%e0%b3%8d 110072100073_1.htm

Select Your Language

Notifications

webdunia
webdunia
webdunia
webdunia

ವಾವ್

ಕನ್ನಡ ಜೋಕ್
ಇಬ್ಬರು ಬ್ಯಾಂಕ್ ದರೋಡೆ ಮಾಡಲಿಕ್ಕಾಗಿ ಬ್ಯಾಂಕ್‌ನೊಳಗೆ ನುಗ್ಗಿದರು. ಅಲ್ಲಿ ಕಂಡ ಎರಡು ಗೋಣಿಚೀಲದ ಮೂಟೆಗಳನ್ನು ತಲಾ ಒಬ್ಬೊಬ್ಬರು ತೆಗೆದುಕೊಂಡು ಹೋದರು. ಸ್ವಲ್ಪ ದಿನಗಳ ನಂತರ ಅವರಿಬ್ಬರು ಮತ್ತೊಮ್ಮೆ ಭೇಟಿಯಾದಾಗ ಒಬ್ಬ 'ನೀನು ತೆಗೆದುಕೊಂಡು ಹೋದ ಆ ಗೋಣಿ ಚೀಲದಲ್ಲಿ ಏನಿತ್ತು?' ಎಂದು ಮತ್ತೊಬ್ಬನಲ್ಲಿ ಕೇಳಿದನು. ಅವನು ಹತ್ತು ಲಕ್ಷ ರೂಪಾಯಿ ಇತ್ತು ಎಂದು ಬಹಳ ಖುಷಿಯಿಂದ ಹೇಳಿದನು. 'ವಾವ್... ಅಷ್ಟು ಹಣವನ್ನು ಏನು ಮಾಡಿದೆ?' ಎಂದು ಕೇಳಿದುದಕ್ಕೆ 'ನಾನು ಒಂದು ಮನೆ ಕೊಂಡುಕೊಂಡೆ. ನಿನ್ನ ಚೀಲ?' ಎಂದು ಮರುಪ್ರಶ್ನಿಸಿದನು. ಅವನು 'ಅಯ್ಯೊ ಆ ಚೀಲದ ತುಂಬ ಬರೀ ಬಿಲ್‌ಗಳೇ ತುಂಬಿತ್ತು' ಎಂದಾಗ ಇವನು 'ಅವನ್ನು ಏನು ಮಾಡಿದೆ?' ಎಂದು ಕೇಳಿದನು. 'ಸ್ವಲ್ಪ ಸ್ವಲ್ಪವೇ ಅವುಗಳನ್ನು ಪಾವತಿಸುತ್ತಿದ್ದೇನೆ' ಎಂದುತ್ತರಿಸಿದನು.

Share this Story:

Follow Webdunia kannada