ಲಾಟರಿ ಟಿಕೇಟ್ ಕೊಳ್ಳುವ ಅಭ್ಯಾಸವನ್ನು ಹೊಂದಿದ್ದ ಸಂತಾನಿಗೆ ಒಮ್ಮೆ 20 ಲಕ್ಷ ರೂಪಾಯಿ ಲಾಟರಿ ಹೊಡೆಯಿತು.
ಸಂತಾನಿಗೆ ಟಿಕೆಟ್ ಮಾರಿದ್ದ ಡೀಲರು ತೆರಿಗೆಯನ್ನೆಲ್ಲಾ ಕಳೆದು ಹನ್ನೊಂದು ಲಕ್ಷವನ್ನು ನೀಡಿದ.
ತನಗೆ ಪೂರ್ತಿ 20 ಲಕ್ಷ ನೀಡಲಿಲ್ಲವೆಂದು ಸಂತಾನಿಗೋ ಸಿಟ್ಟೋ ಸಿಟ್ಟು.
ಕುಪಿತಗೊಂಡ ಸಂತಾ, ನನಗೆ ಮರ್ಯಾದೆಯಲ್ಲಿ 20 ಲಕ್ಷ ಕೊಡಿ ಅದಾಗದಿದ್ದಲ್ಲಿ ನನ್ನ ಟಿಕೆಟ್ಟಿನ 20 ರೂಪಾಯಿಯನ್ನು ಹಿಂದಕ್ಕೆ ಕೊಟ್ಟುಬಿಡಿ...