"ಸಂತಾಗೆ 20 ರೂಪಾಯಿ ಕೊಟ್ಟು ಒಂದು ಲಾಟರಿ ಖರೀದಿಸಿದ್ದ. ಅದಕ್ಕೆ 20ಲಕ್ಷ ರೂಪಾಯಿ ಬಹುಮಾನ ಬಂದಿತ್ತು. ಲಾಟರಿ ಡೀಲರ್ ತೆರಿಗೆ ಎಲ್ಲಾ ಮುರಿದುಕೊಂಡು 11ಲಕ್ಷ ರೂಪಾಯಿ ಕೊಡಲು ಮುಂದಾದ.
ಕೆರಳಿದ ಸಂತಾ, 'ನೋಡಯ್ಯಾ ಮೋಸ ಮಾಡಬೇಡ. ನನಗೆ ಬಹುಮಾನ ಕೊಡೋದಾದ್ರೆ 20 ಲಕ್ಷ ಕೊಡು. ಆಗೋದಿಲ್ಲ ಅಂದ್ರೆ ನನ್ನ 20 ರೂಪಾಯಿ ವಾಪಸ್ ಕೊಡು.. ಸುಮ್ಮನೇ ನನ್ನ ಬಳಿ ತರ್ಲೆ ಮಾಡಬೇಡ' ಎಂದ."