Publish Date: Mon, 09 Nov 2009 (19:55 IST)
Updated Date: Mon, 09 Nov 2009 (19:54 IST)
ಟ್ರಾಫಿಕ್ ಪೋಲೀಸ್ ಅಧಿಕಾರಿಯೊಬ್ಬ ಸೂಕ್ತವಾಗಿ ಅಡಗುವ ರಸ್ತೆಯ ಬೆಂಡ್‌ನಲ್ಲಿ ನಿಂತು ಹೈವೇನಲ್ಲಿ ವೇಗವಾಗಿ ಬರುವ ವಾಹನಗಳನ್ನು ರೆಡಾರ್ ಮೂಲಕ ಹಿಡಿಯುತ್ತಿದ್ದರು. ಒಂದು ವಾರಾಂತ್ಯದಲ್ಲಿ ಅಡಗುವ ಸ್ಥಳಕ್ಕೆ ಆಗಮಿಸಿ ವೇಗಿ ವಾಹನಗಳಿಗೆ ಕಾಯುತ್ತಾ ಅರ್ಧ ಗಂಟೆ ನಿಂತರೂ ಒಂದು ಮಿಕವೂ ಬೀಳಲಿಲ್ಲ.
ಎಲ್ಲ ಕಾರುಗಳಿಗೆ ತಾನು ಇರುವ ಸ್ಥಳ ಅಕ್ಷರಶಃ ತಿಳಿದಿತ್ತೆಂದು ಅರಿವಾದ ಅಧಿಕಾರಿ, ತನಿಖೆಗೆ ನಿರ್ಧರಿಸಿದರು.ಕಾರಿನಿಂದ ಇಳಿದು ರಸ್ತೆಯಲ್ಲಿ ಸ್ವಲ್ಪ ದೂರ ನಡೆದಾಗ 100 ಯಾರ್ಡ್ ದೂರದಲ್ಲಿ ಸಮಸ್ಯೆ ಏನೆಂದು ತಿಳಿಯಿತು. 10 ವರ್ಷ ಪ್ರಾಯದ ಬಾಲಕ ರಸ್ತೆಯ ಬದಿಯಲ್ಲಿ ನಿಂತು ರೆಡಾರ್ ಟ್ರಾಪ್ ಅಹೆಡ್( ರೆಡಾರ್ ಟ್ರಾಪ್ ಮುಂದಿದೆ) ಎಂದು ಕೈಯಿಂದ ಬರೆದ ಸಂಜ್ಞೆಯನ್ನು ಕೈಯಲ್ಲಿ ಹಿಡಿದಿದ್ದ.
ಮತ್ತಷ್ಟು ತನಿಖೆಯಲ್ಲಿ ಬಾಲಕನ ಸ್ನೇಹಿತ ಪತ್ತೆಯಾದ. 'ರೆಡಾರ್ ಟ್ರಾಪ್' ಸ್ಥಳದ ಹಿಂದುಗಡೆಯಲ್ಲಿ 'ಟಿಪ್ಸ್' ಎಂಬ ಸಂಕೇತದೊಂದಿಗೆ ಬಕೆಟ್ ತುಂಬ ತುಂಬಿದ್ದ ಚಿಲ್ಲರೆ ನೋಟುಗಳನ್ನು ಹಿಡಿದು ನಿಂತಿದ್ದ.