ಒಬ್ಬ ಸಣ್ಣ ಹುಡುಗ 100 ರೂಪಾಯಿ ಕೇಳಿ ದೇವರಿಗೆ ಒಂದು ಪತ್ರ ಬರೆದ. ಅದರ ಮೇಲೆ ರಿಗೆ ವಿಳಾಸ 'ದೇವರು' ಎಂದೂ ಮತ್ತು ಮರಳುವ ವಿಳಾಸ ಅವನ ಮನೆಯ ವಿಳಾಸವನ್ನೂ ಬರೆದು ಅಂಚೆಪೆಟ್ಟಿಗೆಗೆ ಹಾಕಿದ. ವಿಳಾಸವನ್ನು ನೋಡಿದ ಪೋಸ್ಟ್‌ಮಾಸ್ಟರ್ ಇದು ಯಾವುದೋ ಪುಟಾಣಿ ಮಗು ಬರೆದದ್ದಿರಬೇಕು ಎಂದೆನಿಸಿ, ಅದನ್ನು ಅಧ್ಯಕ್ಷರಿಗೆ ಕಳುಹಿಸಿದ. ಹುಡುಗನ ಪತ್ರವನ್ನು ಓದಿದ ಅಧ್ಯಕ್ಷರ ಮನಸ್ಸು ಕರಗಿ, ಆ ಹುಡುಗನಿಗೆ 50 ರೂಪಾಯಿ ಕಳುಹಿಸುವಂತೆ ಕಾರ್ಯದರ್ಶಿಯಲ್ಲಿ ಹೇಳಿದರು. ಇದನ್ನು ಪಡೆದ ಹುಡುಗ ಸಂತೋಷಗೊಂಡು ಧನ್ಯವಾದ ಪತ್ರವನ್ನು ಹೀಗೆಂದು ಬರೆದ 'ಪ್ರೀತಿಯ ದೇವರೇ, ನೀನು ಹಣ ಕಳುಹಿಸಿದುದಕ್ಕಾಗಿ ಧನ್ಯವಾದಗಳು. ನೀನು ಅಧ್ಯಕ್ಷರ ಮೂಲಕ ಕಳುಹಿಸಿದಿ ಅಲ್ವಾ ಹಾಗಾಗಿ ಅವರು 50 ರೂಪಾಯಿ ಕಡಿತ ಮಾಡಿದ್ದಾರೆ'.