"ಒಬ್ಬ ಅಮೆರಿಕನ್, ಒಬ್ಬ ಜಪಾನಿ ಮತ್ತು ಸಂತಾ ಮೂವರು ಹಡಗಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ಬಿರುಗಾಳಿ ಬೀಸಲಾರಂಭಿಸಿ ಹಡಗು ಅಲ್ಲಾಡತೊಡಗಿತು, ತುಸು ಹೊತ್ತಿನಲ್ಲೇ ಒಡೆದೂಹೋಯಿತು. ಮೂವರು ಹೆದರಿಕೆಯಿಂದ ದಾರಿತೋರದೆ ಒದ್ದಾಡುತ್ತಿರುವಾಗ ಹಡಗಿನೊಳಗೆ ಒಂದು ಬಾಟಲಿ ಅಮೆರಿಕದವನ ಕೈಗೆ ಸಿಕ್ಕಿತು. ಮೂವರು ಸೇರಿ ಅದರ ಮುಚ್ಚಳ ತೆಗೆದಾಗ, ಅದರೊಳಗಿನಿಂದ ರಾಕ್ಷಸನು ಪ್ರತ್ಯಕ್ಷನಾಗಿ, ""ನೀವುಗಳು ನನ್ನನ್ನು ಬಿಡುಗಡೆ ಮಾಡಿದಕ್ಕೆ ಖುಷಿಯಾಗಿದೆ!! ಮೂವರು ನಿಮ್ಮ ಒಂದೊಂದು ಆಸೆ ಹೇಳಿ, ನಿಮಗೇನಾಗಬೇಕು?""
ಅಮೆರಿಕದವನು ""ನನ್ನನ್ನು ನನ್ನ ಸ್ವದೇಶಕ್ಕೆ ಕಳಿಸು."" ಎಂದು ಕೇಳಿದ ತಕ್ಷಣ ಅವನು ತನ್ನ ದೇಶದಲ್ಲಿದ್ದ!! ಜಪಾನಿಯವನೆಂದ ""ನನ್ನನ್ನು ಈ ಕ್ಷಣ ಇಲ್ಲಿಂದ ನನ್ನ ಲ್ಯಾಬ್ ಗೆ ಕರೆದುಕೊಂಡು ಹೋಗು"" ಎಂದು ಕೇಳಿದ ತಕ್ಷಣ ಜಪಾನಿಯವನು ತನ್ನ ಲ್ಯಾಬ್ ಸೇರಿಕೊಂಡ.
ಈಗ ಸಂತಾನ ಸರದಿ, ರಾಕ್ಷಸ ಕೇಳಿದ, ""ಹೇಳಿ ತಮಗೇನಾಗಬೇಕು?"" ಸಂತಾ ""ನನಗೀಗ ಇಲ್ಲಿ ಒಬ್ಬನಿಗೇ ಹೆದರಿಕೆ ಆಗುತ್ತಿದೆ. ಅವರಿಬ್ಬರನ್ನೂ ಈಗಲೇ ವಾಪಸ್ ಕರೆದು ತಾ!!"""