Article Jokes In Kannada %e0%b2%b0%e0%b2%95%e0%b3%8d%e0%b2%a4 %e0%b2%aa%e0%b2%b0%e0%b2%bf%e0%b2%9a%e0%b2%b2%e0%b2%a8%e0%b3%86 110080200075_1.htm

Select Your Language

Notifications

webdunia
webdunia
webdunia
webdunia

ರಕ್ತ ಪರಿಚಲನೆ

ಕನ್ನಡ ಜೋಕ್
ಟೀಚರ್ ರಕ್ತ ಪರಿಚಲನೆಯ ಬಗ್ಗೆ ಪಾಠ ಮಾಡುತ್ತಿದ್ದರು. ವಿಷಯವನ್ನು ಇನ್ನಷ್ಟು ಸವಿವರವಾಗಿ ಹೇಳುವುದಕ್ಕಾಗಿ 'ನಾನು ತಲೆ ಕೆಳಗೆ ಮಾಡಿ ನಿಂತುಕೊಂಡರೆ ರಕ್ತವೆಲ್ಲಾ ತಲೆಗೆ ಹರಿದು, ಮುಖ ಕೆಂಪಗಾಗುತ್ತದೆ ಅಲ್ಲವೇ?' ಎಂದು ವಿದ್ಯಾರ್ಥಿಗಳಲ್ಲಿ ಕೇಳಿದರು. ಮಕ್ಕಳೆಲ್ಲ ಹೌದು ಎಂದುತ್ತರಿಸಿದರು. ನಂತರ ಟೀಚರ್ ಮತ್ತಷ್ಟು ವಿವರಿಸುತ್ತಾ 'ಮತ್ತೆ ನಾನು ನೇರವಾಗಿ ಸರಿಯಾದ ಸ್ಥಿತಿಯಲ್ಲಿ ನಿಂತುಕೊಂಡರೆ ರಕ್ತ ಯಾಕೆ ಪಾದದ ಕಡೆಗೆ ಹರಿಯುವುದಿಲ್ಲ?' ಎಂದು ಕೇಳಿದರು. ತುಂಟ ಸಣ್ಣ ಹುಡುಗ 'ಏಕೆಂದರೆ ನಿಮ್ಮ ಪಾದ ಖಾಲಿಯಾಗಿಲ್ಲ' ಎಂದು ಉತ್ತರಿಸಿದನು.

Share this Story:

Follow Webdunia kannada