ಯುಎಸ್‌ನ ಒಂದು ಫಾಕ್ಟರಿಯಲ್ಲಿ ವಿವಾಹಿತ ಪುರುಷರನ್ನು ಮಾತ್ರ ಕೆಲಸಕ್ಕೆ ತೆಗೆದುಕೊಳ್ಳಲಾಗುತ್ತಿತ್ತು. ಇದನ್ನು ತಿಳಿದ ಸ್ಥಳೀಯ ಮಹಿಳೆಯೊಬ್ಬಳು ಮ್ಯಾನೇಜರ್ ಅನ್ನು ಕೇಳಿದಳು "ನಿಮ್ಮ ಫಾಕ್ಟರಿಯಲ್ಲಿ ಕೆಲಸವನ್ನು ವಿವಾಹಿತ ಪುರುಷರಿಗೆ ಮಾತ್ರ ಮೀಸಲಿಟ್ಟಿದ್ದೀರಿ, ನಿಮ್ಮ ಪ್ರಕಾರ ಮಹಿಳೆಯರು ಅರ್ಹರಲ್ಲ ಎನ್ನುತ್ತೀರಾ?" ಎಂದಾಗ, "ಅಲ್ಲ ಮೇಡಂ, ವಿವಾಹಿತ ಪುರುಷರಿಗೆ ಮಾತ್ರ, ಎಷ್ಟೇ ಬೈದರೂ ಬಾಯಿ ಮುಚ್ಚಿಕೊಂಡು ಪಾಲಿಸುವುದು ಗೊತ್ತಿರುವುದು, ಹಾಗಾಗಿ, ನಮ್ಮ ಫಾಕ್ಟರಿಯಲ್ಲೂ ನನ್ನ ಆಜ್ಞೆಯನ್ನು ಪಾಲಿಸುತ್ತಾರೆ!" ಎಂದನು.