ಮೈಕಲ್‌ನ ನಾಲ್ಕು ಮಂದಿ ಮಕ್ಕಳಲ್ಲಿ, ಮೊದಲ ಮೂವರು ಉದ್ದಕ್ಕಿದ್ದು, ದಪ್ಪವಾಗಿಯೂ ಇದ್ದರು, ಆದರೆ ಕೊನೆಯವನಾದ ಕ್ಯಾರಿಕ್ ಮಾತ್ರ ಕುಳ್ಳಗಿದ್ದು ತೆಳ್ಳಗಿದ್ದ. ಮೈಕಲ್ ಸಾವಿನ ಕ್ಷಣವನ್ನು ಎಣಿಸುತ್ತಿರುವಾಗ, ತನ್ನ ಹೆಂಡತಿ ನೇರಿಯನ್ನು ಕರೆದು, "ಮೇರಿ, ನಿಜವಾಗಿಯೂ ಹೇಳು, ನಾನು ಕ್ಯಾರಿಕ್‌ನ ಅಪ್ಪನೇ?" "ಹೌದು, 100% ನಿಮ್ಮ ಮಗನೇ" ಎಂದಳು. "ನಾನು ಈಗ ಸಂತೋಷದಿಂದ ಪ್ರಾಣ ಬಿಡುತ್ತೇನೆ" ಎಂದು ಸ್ವರ್ಗವನ್ನು ಸೇರಿದನು. ಇದಾದನಂತರ ಮೇರಿಯು ದೀರ್ಘ ಉಸಿರುಬಿಟ್ಟು ನಿಧಾನವಾಗಿ, "ನನ್ನ ಕಾಪಾಡಿದೆ ತಂದೆ, ಉಳಿದ ಮೂವರ ಕುರಿತು ಅವನು ಕೇಳಲಿಲ್ಲ".