ಪ್ರಖ್ಯಾತ ವಿಶ್ವವಿದ್ಯಾನಿಲದ ಒಂದು ತರಗತಿಯಲ್ಲಿ ಭೌತಶಾಸ್ತ್ರ ಪಾಠ ನಡೆಯುತ್ತಿತ್ತು. ತುಂಬಾ ಕ್ಲಿಷ್ಟಕರವಾದ ಒಂದು ವಿಷಯವನ್ನು ಪ್ರೊಫೆಸರ್ ಅತೀ ಗಂಭೀರದಿಂದ ಬೋಧಿಸುತ್ತಿದ್ದರು. ಆಗ ಒಬ್ಬ ವಿದ್ಯಾರ್ಥಿ ಮಧ್ಯದಲ್ಲಿ ಬಾಯಿ ಹಾಕಿ 'ನಾವು ಯಾಕೆ ಈ ಪದಾರ್ಥದ ಬಗ್ಗೆ ತಿಳಿದುಕೊಳ್ಳಬೇಕು?' ಎಂದನು. 'ಜೀವಿಗಳನ್ನು ಉಳಿಸಲು' ಎಂದು ತಕ್ಷಣ ಉತ್ತರಿಸಿದ ಪ್ರೊಫೆಸರ್ ಪಾಠವನ್ನು ಮತ್ತೆ ಮುಂದುವರಿಸಿದರು. ಸ್ವಲ್ಪ ಸಮಯದ ನಂತರ ಅದೇ ವಿದ್ಯಾರ್ಥಿ ಮತ್ತೆ 'ಹಾಗಾದರೆ ಬೌತಶಾಸ್ತ್ರ ಜೀವಿಗಳನ್ನು ಹೇಗೆ ಉಳಿಸುತ್ತದೆ?' ಎಂದು ಕೇಳಿದನು. ಅದಕ್ಕೆ ಪ್ರೊಫೆಸರ್ 'ಸಾಮಾನ್ಯವಾಗಿ ಇದು ನಿನ್ನಂತಹ ಮೂರ್ಖರನ್ನು ಮೆಡಿಕಲ್ ಸ್ಕೂಲ್‌ನಿಂದ ಹೊರಗಿಡುತ್ತದೆ' ಎಂದರು.