ಬಂತಾನಿಗೆ ಯಾವುದಾದರೂ ಹುಡುಗಿಯನ್ನು ಪ್ರೀತಿಸಬೇಕು ಅಂತ ತುಂಬಾ ಆಸೆ. ಕೊನೆಗೂ ಒಂದು ಹುಡುಗಿಗೆ ಪ್ರಪೋಸ್ ಮಾಡಿದ. ನಾನು ನಿನ್ನನ್ನು ತುಂಬಾ ಪ್ರೀತಿ ಮಾಡ್ತಾ ಇದ್ದೇನೆ ನನ್ನನ್ನು ಮದುವೆಯಾಗ್ತೀಯ ಅಂತ ಕೇಳಿದ.
ಆ ಹುಡುಗಿಯು ಬೇಸರದಿಂದ, ನಾನು ನಿನ್ನ ಮದುವೆಯಾಗಬಹುದಿತ್ತು ಆದರೆ ಏನು ಮಾಡಲಿ ನಾನು ನಿನಗಿಂತ ಒಂದು ವರ್ಷ ದೊಡ್ಡವಳು ಎಂದಳು.
ಸ್ವಲ್ಪವೂ ಬೇಸರಗೊಳ್ಳದ ಬಂತಾ ಹೇಳಿದ, 'ಪರವಾಗಿಲ್ಲ ಡಿಯರ್, ನಾನು ನಿನ್ನನ್ನು ಮುಂದಿನ ವರ್ಷ ಮದುವೆಯಾಗುತ್ತೇನೆ'..!