ಉದ್ಯಾನದಲ್ಲಿ ಒಬ್ಬ ಮಧ್ಯವಯಸ್ಕ ಕೂತು ಒಬ್ಬರೇ ಅಳುತ್ತಿದ್ದರು. ಆಗ ಅಲ್ಲಿಗೆ ಬಂದ ಯುವಕನೊಬ್ಬ, "ಏನ್ರೀ ಸಾರ್.. ಏನಾದ್ರೂ ಸಮಸ್ಯೆಯಲ್ಲಿದ್ದೀರಾ?" ಎಂದ.
ಮಧ್ಯವಯಸ್ಕ: ಎಲ್ಲಾ ಚೆನ್ನಾಗಿಯೇ ಇದೆ. ಸುಂದರವಾದ ಹೆಂಡತಿಯಿದ್ದಾಳೆ, ದೊಡ್ಡ ಮನೆಯಿದೆ, ಮುದ್ದಾದ ಮಗು ಬೇರೆ. ಮನೆಯಲ್ಲೇ ಈಜು ಕೊಳ ಕೂಡ ಇದೆ...
ಯುವಕ: ಇನ್ನೇನು ಸಾರ್? ಆರಾಮವಾಗೇ ಇದ್ದೀರಲ್ಲಾ..
ಮಧ್ಯವಯಸ್ಕ: ಆದರೆ ನನ್ನ ಮನೆ ಎಲ್ಲಿದೆ ಎಂಬುದೇ ಮರೆತುಹೋಗಿದೆ..!