"ಅವರ ಮದುವೆ ವಾರ್ಷಿಕ ದಿನದ ರಾತ್ರಿ ಗಂಡ ಹೆಂಡಿರ ನಡುವೆ ಬೀಕರವಾದ ಜಗಳವಾಯಿತು. ಆದರೆ ಬೆಳಿಗ್ಗೆನೂ ಈ ಸಿಟ್ಟು ಇಳಿದಿರಲಿಲ್ಲ. ಅಂದು ಗಂಡನು ಮದುವೆಯ ವಾರ್ಷಿಕೋತ್ಸವಕ್ಕೆ ಉಡುಗೊರೆಯಾಗಿ ಸಮಾಧಿ ಶಿಲೆಯನ್ನು ನೀಡಿದನು. ಅದರಲ್ಲಿ ಹೀಗೆ ಬರೆಯಲಾಗಿತ್ತು : ""ಇಲ್ಲಿ ನನ್ನ ಹೆಂಡತಿ ನಿರ್ದಾಕ್ಷಿಣ್ಯವಾಗಿ ಮಲಗಿದ್ದಾಳೆ"".
ನಂತರ ಮತ್ತಷ್ಟು ಸಿಟ್ಟುಕೊಂಡ ಹೆಂಡತಿ ಅವನಿಗಾಗಿ ಉಡುಗೊರೆಯನ್ನು ತಂದಳು - ಅದೂ ಕೂಡ ಸಮಾಧಿ ಶಿಲೆಯಾಗಿತ್ತು. ಅದರಲ್ಲಿ ಹೀಗೆ ಬರೆಯಲಾಗಿತ್ತು : ""ಇಲ್ಲಿ ನನ್ನ ಗಂಡ ಹೆಣವಾಗಿ ಮಲಗಿದ್ದಾರೆ""."