ಹುಡುಗಿಯರನ್ನಿಬ್ಬರನ್ನು ಬಹುದೂರದಿಂದ ಫಾಲೋ ಮಾಡಿಕೊಂಡು ಬರುತ್ತಿದ್ದ ಹುಡುಗರಿಗೆ ಆ ಹುಡುಗಿಯರು ರಾಖಿ ಕಟ್ಟಿಬಿಟ್ಟರು. ಹುಡುಗರಿಗೆ ಇದು ಅನಿರೀಕ್ಷಿತವಾಗಿತ್ತು.
ಅಘಾತದಿಂದ ಚೇತರಿಸಿಕೊಂಡ ಹುಡುಗರಿಬ್ಬರು ಒಬ್ಬರಿಗೊಬ್ಬರು ಹೇಳಿಕೊಂಡರು. ನಿನ್ನ ತಂಗಿಯನ್ನು ನಾನು ಮದುವೆಯಾಗುತ್ತೇನೆ. ನನ್ನ ತಂಗಿಯನ್ನು ನೀನು ಮದುವೆಯಾಗು!