ಒಬ್ಬ ಮಹಿಳೆ ತನ್ನ ಭಾವಚಿತ್ರವನ್ನು ಚಿತ್ರಿಸಲು ತೀರ್ಮಾನಿಸಿದಳು. ಚಿತ್ರಕಾರನಿಗೆ, ತಾನು ಡೈಮಂಡ್ ಕಿವಿಯೋಲೆ, ಡೈಮಂಡ್ ನೆಕ್ಲೇಸ್, ಡೈಮಂಡ್ ಬ್ರೆಸ್ಲೈಟ್, ಮುಂತಾದವುಗಳನ್ನು ಧರಿಸಿರುವಂತೆ ಚಿತ್ರಿಕರಿಸಲು ತಿಳಿಸಿದಳು. ಅದನ್ನು ಕೇಳಿ ಆಶ್ಚರ್ಯಗೊಂಡ ಚಿತ್ರಕಾರ , "ನೀವು ಇದಾವುದನ್ನೂ ಹಾಕಿಕೊಂಡಿಲ್ಲವಲ್ಲ" ಎಂದನು. "ಹೌದು, ನನಗೆ ತಿಳಿದಿದೆ, ಆದರೆ ಒಂದು ವೇಳೆ ನನ್ನ ಗಂಡನಿಗಿಂತ ಮೊದಲು ನಾನು ಸತ್ತುಹೋದರೆ, ಖಂಡಿತವಾಗಿಯೂ ನನ್ನ ಗಂಡ ಇನ್ನೊಂದು ಮದುವೆಯಾಗುತ್ತಾರೆ. ಅವರ ಹೊಸ ಹೆಂಡತಿ ನನ್ನ ಆಭರಣವನ್ನು ನೋಡಿ ಅವಳಿಗೆ ಆಸೆ ಹುಟ್ಟಿಸಬೇಕೆಂಬುವುದೇ ನನ್ನ ಇಚ್ಛೆ" ಎಂದಳು.